Select Your Language

Notifications

webdunia
webdunia
webdunia
webdunia

ದರ್ಶನ್ ಲ್ಯಾಂಬೋರ್ಗಿನಿಗೆ ಅಡ್ವಾನ್ಸ್ ಕೊಟ್ಟವನೇ ನಾನು: ಉಮಾಪತಿ

ದರ್ಶನ್ ಲ್ಯಾಂಬೋರ್ಗಿನಿಗೆ ಅಡ್ವಾನ್ಸ್ ಕೊಟ್ಟವನೇ ನಾನು: ಉಮಾಪತಿ

Sampriya

ಬೆಂಗಳೂರು , ಮಂಗಳವಾರ, 18 ಜೂನ್ 2024 (15:35 IST)
photo Courtesy Instagram
ಬೆಂಗಳೂರು: ನಟ ದರ್ಶನ್ ಅವರು ಯಾವಾಗಲೂ ಲ್ಯಾಂಬೋರ್ಗಿನಿ ಅಂತಾ ಹೇಳ್ತಾರೆ, ಆ ಲ್ಯಾಂಬೋರ್ಗಿನಿ ಬುಕ್ ಮಾಡೋಕೆ ಅಡ್ವಾನ್ಸ್ ಕೊಟ್ಟವನೇ ನಾನು ಎಂದು ನಿರ್ಮಾಪಕ ಉಮಾಪತಿ ಶ್ರೀನಿವಾಸ್ ಗೌಡ ಅವರು ಟಾಂಗ್ ಕೊಟ್ಟರು.

ಇಂದು ರೇಣುಕಸ್ವಾಮಿ ಕೊಲೆ ಪ್ರಕರಣದಲ್ಲಿ ಎ 2 ಆರೋಪಿಯಾಗಿರುವ ನಟ ದರ್ಶನ್ ಅವರ ಬಗ್ಗೆ ಖಾಸಗಿ ವಾಹಿನಿಯೊಂದಕ್ಕೆ ಪ್ರತಿಕ್ರಿಯಿಸಿ ಅವರು ಮಾತನಾಡಿದರು.

ಸಾರ್ವಜನಿಕ ಬದುಕಿಗೆ ಬಂದ್ಮೇಲೆ ಕಾಲು ಎಳೆಯೋರು ಇರಬೇಕು, ಬೆನ್ನು ತಟ್ಟೋರು ಇರಬೇಕು. ನಮ್ಮ ಬೆರಳು ಇನ್ನೊಬ್ಬರ ಕಣ್ಣಿಗೆ ಚುಚ್ಚಿದರೆ ನೋವಾಗುತ್ತೆ. ಹಾಗೇ ನಮ್ಮ ಬೆರಳು ನಮ್ಮ ಕಣ್ಣಿಗೆ ಚುಚ್ಚಿದರೂ ನಮಗೆ ನೋವಾಗುತ್ತದೆ ಅಷ್ಟೇ ನಾನು ಹೇಳೋದು ಎಂದರು.

ದೊಡ್ಡವರಿಗೂ, ಸಣ್ಣವರಿಗೆ ಒಂದೇ ನ್ಯಾಯ. ಮಾರುತಿ ಕಾರಲ್ಲಿ ಹೋಗುವವರಿಗೆ, ಲ್ಯಾಂಬೋರ್ಗಿನಿಯಲ್ಲಿ ಹೋಗುವವರಿಗೆ ಒಂದೇ ನ್ಯಾಯ ಇರಬೇಕು. ಪೊಲೀಸ್​ ಇಲಾಖೆ ಬಗ್ಗೆ ಜನಗಳಿಗೆ ನಂಬಿಕೆ ಬಂದಿದೆ.

ಇನ್ನೂ ನಾನು ಮೊದಲು ದರ್ಶನ್ ಗುಂಪಿನಲ್ಲಿ ಗುರುತಿಸಿಕೊಂಡಿದ್ದೆ. ಪುಣ್ಯಕ್ಕೆ ದೇವರು ನನ್ನನ್ನು ಆ ಗುಂಪಿನಿಂದ ಹೊರ ತಂದಿದ್ದಾರೆ ಎಂದು ಖುಷಿ ವ್ಯಕ್ತಪಡಿಸಿದರು.



Share this Story:

Follow Webdunia kannada

ಮುಂದಿನ ಸುದ್ದಿ

ವೆಹಿಕಲ್ ಮೇಲೆ ಬರೆದಿದ್ದ ಡಿ ಬಾಸ್ ಬರಹ ಅಳಿಸುತ್ತಿರುವ ಫ್ಯಾನ್ಸ್