Publish Date: Wed, 19 Jun 2024 (10:53 IST)
Updated Date: Wed, 19 Jun 2024 (10:58 IST)
ಬೆಂಗಳೂರು: ಇಷ್ಟು ದಿನ ಸ್ಯಾಂಡಲ್ ವುಡ್ ಚಕ್ರವರ್ತಿ, ಬಾಕ್ಸ್ ಆಫೀಸ್ ಸುಲ್ತಾನ ಎಂದು ಮೆರೆದಾಡುತ್ತಿದ್ದ ದರ್ಶನ್ ಗೆ ಈಗ ಪೊಲೀಸ್ ಲಾಕಪ್ ನಲ್ಲಿ ಸಾಮಾನ್ಯ ಕೈದಿಗಳಂತೆ ಟ್ರೀಟ್ ಮೆಂಟ್ ಸಿಗುತ್ತಿದೆ.
ದರ್ಶನ್ ಸೆಲೆಬ್ರಿಟಿಯಾಗಿರುವುದರಿಂದ ಅವರಿಗೆ ರಾಜಾತಿಥ್ಯ ಸಿಗಬಹುದು ಎಂದು ಊಹಿಸಲಾಗಿತ್ತು. ಆದರೆ ಯಾವಾಗ ಸ್ವತಃ ಸಿಎಂ ಸಿದ್ದರಾಮಯ್ಯನವರೇ ನಾವು ಯಾವುದೇ ವಿಚಾರಕ್ಕೂ ಹಸ್ತಕ್ಷೇಪ ಮಾಡಲ್ಲ. ಪೊಲೀಸರು ಸ್ವತಂತ್ರವಾಗಿ ತನಿಖೆ ಮಾಡಬಹುದು ಎಂದರೋ, ದರ್ಶನ್ ರನ್ನು ಸಾಮಾನ್ಯ ಕೈದಿಯಂತೆ ಟ್ರೀಟ್ ಮಾಡಲಾಗುತ್ತಿದೆ.
ಪೊಲೀಸ್ ಲಾಕಪ್ ನಲ್ಲಿ ದರ್ಶನ್ ಗೆ ಮಲಗಲು ಹಾಸಿಗೆ, ದಿಂಬು ಅಥವಾ ಕೂರಲು ಕುರ್ಚಿ ಸೇರಿದಂತೆ ಯಾವುದೇ ಸೌಕರ್ಯ ಒದಗಿಸಲಾಗಿಲ್ಲ. ಸಾಮಾನ್ಯ ಕೈದಿಗಳಂತೇ ದರ್ಶನ್ ಕೂಡಾ ಕೈಯನ್ನೇ ದಿಂಬಾಗಿಸಿ, ನೆಲವನ್ನೇ ಹಾಸಿಗೆಯಾಗಿಸಿ ಮಲಗುತ್ತಿದ್ದಾರೆ. ಅವರೊಬ್ಬರನ್ನೇ ಒಂದು ಲಾಕಪ್ ನಲ್ಲಿರಿಸಲಾಗಿದೆ.
ಇನ್ನು ವಿಚಾರಣೆ ಸಂದರ್ಭದಲ್ಲಿ ಇನ್ನೊಂದು ರೂಂಗೆ ಕರೆದುಕಂಡು ಬರಲಾಗುತ್ತದೆ. ಅದರ ಹೊರತಾಗಿ ಅವರು ಲಾಕಪ್ ನಲ್ಲಿ ಸಾಮಾನ್ಯ ಕೈದಿಯಂತೆ ಯಾವದೇ ಸೌಲಭ್ಯಗಳಿಲ್ಲದೇ ಕಾಲ ಕಳೆಯಬೇಕಾಗಿದೆ.