Publish Date: Thu, 20 Jun 2024 (14:26 IST)
Updated Date: Thu, 20 Jun 2024 (14:28 IST)
ಬೆಂಗಳೂರು: ಕರ್ನಾಟಕ ಕ್ರಿಕೆಟಿಗ ಮನೀಶ್ ಪಾಂಡೆ ಮತ್ತು ಪತ್ನಿ ಆಶ್ರಿತಾ ದಾಂಪತ್ಯದಲ್ಲಿ ಬಿರುಕು ಮೂಡಿದೆ ಎಂಬ ಸುದ್ದಿಯೊಂದು ಬಲವಾಗಿ ಕೇಳಿಬರುತ್ತಿದೆ. ಇದರ ಸುಳಿವು ನೀಡಿರುವುದು ಇಬ್ಬರ ಸೋಷಿಯಲ್ ಮೀಡಿಯಾ ಪೋಸ್ಟ್.
ಕರ್ನಾಟಕ, ಟೀಂ ಇಂಡಿಯಾ ಮತ್ತು ಐಪಿಎಲ್ ತಂಡಗಳಲ್ಲಿ ಆಡಿರುವ ಅನುಭವಿಯಾಗಿರುವ ಸ್ಪುರದ್ರೂಪಿ ಕ್ರಿಕೆಟಿಗ ಮನೀಶ್ ಪಾಂಡೆ 2019 ರಲ್ಲಿ ಆಶ್ರಿತಾ ಶೆಟ್ಟಿ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಇದೀಗ ಮದುವೆಯಾಗಿ ಐದು ವರ್ಷಗಳ ಬಳಿಕ ದಂಪತಿ ಬೇರೆಯಾಗುತ್ತಿರುವ ಸುದ್ದಿ ಹರಿದಾಡುತ್ತಿದೆ.
ಇದಕ್ಕೆ ಕಾರಣವಾಗಿರುವುದು ಇಬ್ಬರ ಇನ್ ಸ್ಟಾಗ್ರಾಂ ಪೋಸ್ಟ್ ಗಳು. ಇಷ್ಟು ದಿನ ಮನೀಶ್ ಮತ್ತು ಆಶ್ರಿತಾ ತಮ್ಮ ಇನ್ ಸ್ಟಾಗ್ರಾಂ ಖಾತೆಯಿಂದ ತಾವಿಬ್ಬರೂ ಜೊತೆಯಾಗಿರುವ ಫೋಟೋಗಳನ್ನು ಡಿಲೀಟ್ ಮಾಡಿದ್ದಾರೆ. ಮದುವೆ ಫೋಟೋಗಳನ್ನೂ ಕಿತ್ತು ಹಾಕಿದ್ದಾರೆ.
ಸಾಮಾನ್ಯವಾಗಿ ಸೆಲೆಬ್ರಿಟಿಗಳ ನಡುವಿನ ವಿರಸ ಸಾರ್ವಜನಿಕರಿಗೆ ಗೊತ್ತಾಗುವುದೇ ಸೋಷಿಯಲ್ ಮೀಡಿಯಾದಿಂದ. ಇದೀಗ ಮನೀಶ್ ವಿಚಾರದಲ್ಲೂ ಇದೇ ರೀತಿ ಆಗಿದೆ. ತಮಿಳಿನಲ್ಲಿ ಕೆಲವು ಸಿನಮಾ ಮಾಡಿರುವ ಆಶ್ರಿತಾ ನಟಿ ಮಾತ್ರವಲ್ಲದೆ, ಮಾಡೆಲ್ ಆಗಿಯೂ ಗುರುತಿಸಿಕೊಂಡಿದ್ದರು.