Select Your Language

Notifications

webdunia
webdunia
webdunia
webdunia

ವೈದ್ಯೆ ವಿದ್ಯಾರ್ಥಿನಿಯ ರೇಪ್‌, ಕೊಲೆ ಪ್ರಕರಣ: ಸಂಸದ ಸ್ಥಾನಕ್ಕೆ ಟಿಎಂಸಿ ನಾಯಕ ಗುಡ್‌ಬೈ

ವೈದ್ಯೆ ವಿದ್ಯಾರ್ಥಿನಿಯ ರೇಪ್‌, ಕೊಲೆ ಪ್ರಕರಣ: ಸಂಸದ ಸ್ಥಾನಕ್ಕೆ ಟಿಎಂಸಿ ನಾಯಕ ಗುಡ್‌ಬೈ

Sampriya

ಕೋಲ್ಕತ್ತ , ಭಾನುವಾರ, 8 ಸೆಪ್ಟಂಬರ್ 2024 (14:13 IST)
Photo Courtesy X
ಕೋಲ್ಕತ್ತ: ಮಹತ್ವದ ಬೆಳವಣಿಗೆಯಲ್ಲಿ ಇಲ್ಲಿನ ವೈದ್ಯಕೀಯ ವಿದ್ಯಾರ್ಥಿನಿಯ ರೇಪ್‌ ಮತ್ತು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಟಿಎಂಸಿ ರಾಜ್ಯಸಭಾ ಸದಸ್ಯರೊಬ್ಬರು ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ.

ರಾಷ್ಟ್ರವ್ಯಾಪಿ ತೀವ್ರ ಸದ್ದು ಮಾಡಿರುವ ಆರ್​. ಜಿ. ಕರ್​ ಮಡಿಕಲ್​ ಕಾಲೇಜು ಮತ್ತು ಆಸ್ಪತ್ರೆಯ ಟ್ರೈನಿ ವೈದ್ಯೆ ಹತ್ಯೆ ಪ್ರಕರಣ ಬಿಜೆಪಿ ಹಾಗೂ ಟಿಎಂಸಿ ನಡುವಿನ ರಾಜಕೀಯ ಸಂಘರ್ಷಕ್ಕೆ ನಾಂದಿ ಹಾಡಿದೆ. ಮತ್ತೊಂದೆಡೆ, ಸಿಬಿಐ ತನಿಖೆಯನ್ನು ಮತ್ತಷ್ಟು ಚುರುಕುಗೊಳಿಸಿದೆ.

ಮಾಜಿ ಐಎಎಸ್​ ಅಧಿಕಾರಿ ಆಗಿರುವ ಟಿಎಂಸಿ ಸಂಸದ ಜವಾಜವಾಹರ್ ಸಿರ್ಕಾರ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ,ಅವರಿಗೆ ರಾಜೀನಾಮೆ ಪತ್ರವನ್ನು ಬರೆದಿದ್ದು, ರಾಜ್ಯವನ್ನು ಉಳಿಸಲು ಏನಾದರೂ ಮಾಡಿ ಎಂದು ಆಗ್ರಹಿಸಿದ್ದಾರೆ.

ರಾಜ್ಯ ಸರ್ಕಾರ ಕೂಡಲೇ ಈ ವಿಚಾರದಲ್ಲಿ ಅಗತ್ಯ ಕ್ರಮ ಕೈಗೊಂಡು ತಪ್ಪಿತಸ್ಥರನ್ನು ಶಿಕ್ಷಿಸಬೇಕು. ಇಲ್ಲದಿದ್ದರೆ ರಾಜ್ಯದಲ್ಲಿ ಮುಂದಿನ ದಿನಗಳಲ್ಲಿ ಪರಿಸ್ತಿತಿ ಕೈ ಮೀರಬಹುದು ಎಂದು ಮಮತಾ ಬ್ಯಾನರ್ಜಿಗೆ ಬರೆದಿರುವ ರಾಜೀನಾಮೆ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ಆರ್‌ಜಿ ಕರ್ ಆಸ್ಪತ್ರೆಯಲ್ಲಿ ನಡೆದ ಭೀಕರ ಘಟನೆಯಿಂದ ಒಂದು ತಿಂಗಳ ಕಾಲ ನಾನು ತಾಳ್ಮೆಯಿಂದ ಎದುರು ನೋಡಿದೆ. ಸರ್ಕಾರ ಯಾವುದೇ ಕ್ರಮವನ್ನು ತೆಗೆದುಕೊಳ್ಳಲಿಲ್ಲ ಎಂದು ಬೇಸರ ಹೊರಹಾಕಿದ್ದಾರೆ.


Share this Story:

Follow Webdunia kannada

ಮುಂದಿನ ಸುದ್ದಿ

ಮನೆಯಲ್ಲಿ ಆಟವಾಡುತ್ತಿದ್ದ ಮಗು ಬಾಟಲ್ ಮುಚ್ಚಳ ನುಂಗಿ ಸಾವು