Publish Date: Sat, 13 Apr 2024 (16:00 IST)
Updated Date: Sat, 13 Apr 2024 (16:05 IST)
ಜಲ್ಪೈಗುರಿ: ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ 200 ಸ್ಥಾನಗಳನ್ನು ಸಹ ಗೆಲ್ಲುವುದಿಲ್ಲ ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹೇಳಿದರು.
ಇಲ್ಲಿ ನಡೆದ ಚುನಾವಣಾ ರ್ಯಾಲಿನ್ನು ಉದ್ದೇಶಿಸಿ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿ ಅವರು ನೀಡಿದ ಭರವಸೆಗಳೆಲ್ಲ ಸುಳ್ಳು ಎಂದು ಆರೋಪಿಸಿದರು.
ತೃಣಮೂಲ ಕಾಂಗ್ರೆಸ್ ವರಿಷ್ಠರು, ಬಿ ಆರ್ ಅಂಬೇಡ್ಕರ್ ಅವರು ರಚಿಸಿದ ದೇಶದ ಸಂವಿಧಾನವನ್ನು ಬಿಜೆಪಿ ನಾಶಪಡಿಸಿದೆ ಎಂದು ಆರೋಪಿಸಿದರು.
"ಬಿಜೆಪಿ 200 ಸ್ಥಾನಗಳನ್ನು ಸಹ ಗೆಲ್ಲುವುದಿಲ್ಲ. ಉತ್ತರ ಬಂಗಾಳಕ್ಕೆ ಅವರು ಏನು ಮಾಡಿದ್ದಾರೆ? ಪ್ರಧಾನಿ ನರೇಂದ್ರ ಮೋದಿಯವರ 'ಗ್ಯಾರಂಟಿ'ಗಳಿಗೆ ಬಲಿಯಾಗಬೇಡಿ. ಎಂದು ಟಿಎಂಸಿಯ ಕಾರ್ಯಕ್ರಮದಲ್ಲಿ ಬ್ಯಾನರ್ಜಿ ಹೇಳಿದರು