Publish Date: Fri, 12 Apr 2024 (17:27 IST)
Updated Date: Fri, 12 Apr 2024 (17:32 IST)
ಪಟ್ನಾ: ಪ್ರಧಾನಿ ನರೇಂದ್ರ ಮೋದಿ ಅವರನ್ನು ಗುರಿಯಾಗಿಸಿ ನಾನು ಯಾವುದೇ ಹೇಳಿಕೆ ನೀಡಿಲ್ಲ ಎಂದು ಆರ್‌ಜೆಡಿ ಅಧ್ಯಕ್ಷ ಲಾಲು ಪ್ರಸಾದ ಅವರ ಹಿರಿಯ ಪುತ್ರಿ ಮೀಸಾ ಭಾರತಿ ಶುಕ್ರವಾರ ಹೇಳಿದರು.
ಮೋದಿ ವಿರುದ್ಧ ತಮ್ಮ ಹೇಳಿಕೆಯನ್ನ ತಿರುಚಲಾಗಿದೆ. ಇನ್ನೂ ಮೀಸಾ ಭಾರತಿ ಅವರು ಇಂಡಿಯಾ ಮೈತ್ರಿಕೂಟ ಅಧಿಕಾರಕ್ಕೆ ಬಂದರೆ ಪ್ರಧಾನಿ ಮೋದಿ ಅವರ ಜೈಲು ಸೇರುತ್ತಾರೆ ಎಂದು ಹೇಳಿದ್ದಾರೆಂಬ ಸುದ್ದಿಯಾಗಿತ್ತು.
ಪಾಟಲಿಪುತ್ರ ಲೋಕಸಭಾ ಕ್ಷೇತ್ರದ ಅಭ್ಯರ್ಥಿಯಾಗಿರುವ ಅವರು ಈಚೆಗೆ ನಡೆದ ಸಾರ್ವಜನಿಕ ಸಭೆಯಲ್ಲಿ ನೀಡಿದ್ದಾರೆ ಎನ್ನಲಾದ ಹೇಳಿಕೆಗೆ ಬಿಜೆಪಿ ಆಕ್ರೋಶ ವ್ಯಕ್ತಪಡಿಸಿತ್ತು.
ಪ್ರಧಾನಿ ಬಗ್ಗೆ ನಾನು ಯಾವುದೇ ಹೇಳಿಕೆ ನೀಡಿಲ್ಲ. ಮಾಧ್ಯಮಗಳು ನನ್ನ ಪೂರ್ಣ ಹೇಳಿಕೆಯನ್ನು ಪ್ರಸಾರ ಮಾಡದೆ, ತಿರುಚಿದ ತುಣಕನ್ನು ಮಾತ್ರ ಬಿತ್ತರಿಸಿವೆ. ಅದು ಬಿಜೆಪಿಯ ಕಾರ್ಯಸೂಚಿ ಎಂದು ಮೀಸಾ ಅವರು ಸ್ಪಷ್ಟನೆ ನೀಡಿದ್ದಾರೆ.