Publish Date: Thu, 11 Apr 2024 (15:56 IST)
Updated Date: Thu, 11 Apr 2024 (16:00 IST)
ಶಿವಮೊಗ್ಗ: ಮಾಜಿ ಉಪಮುಖ್ಯಮಂತ್ರಿ ಕೆ ಎಸ್ ಈಶ್ವರಪ್ಪ ಅವರು ಮೋದಿ ಫೋಟೋ ಬಳಸಿ ಪ್ರಚಾರ ನಡೆಸುತ್ತಿರುವ ಬಗ್ಗೆ ಚುನಾವಣಾ ಆಯೋಗಕ್ಕೆ ಬಿಜೆಪಿ ದೂರು ನೀಡಿದೆ ಎಂದು ಸಂಸದ ಬಿ.ವೈ. ರಾಘವೇಂದ್ರ ಹೇಳಿದರು.
ಇಂದು ನಗರದಲ್ಲಿ ಮಾಧ್ಯಮಗಳ ಜತೆ ಮಾತನಾಡಿದ ಅವರು, ನರೇಂದ್ರ ಮೋದಿ ಅವರ ಪೋಟೋ ಬಳಕೆ ನಮಗೆ (ಬಿಜೆಪಿ) ಸಂವಿಧಾನದ ಚೌಕಟ್ಟಿನಲ್ಲಿರುವ ಅವಕಾಶ. ಹೀಗಾಗಿ ಈಶ್ವರಪ್ಪ ಅವರ ಧೋರಣೆಯನ್ನು ಪಕ್ಷದ ವತಿಯಿಂದ ಚುನಾವಣಾ ಆಯೋಗದ ಮುಂದೆ ಪ್ರಶ್ನೆ ಮಾಡಲಾಗಿದೆ. ಮುಂದಿನ ನಿರ್ಧಾರಕ್ಕೆ ಕಾದು ನೋಡಬೇಕು ಎಂದರು.
ನಾನು ಏ.18ರಂದು ನಾಮಪತ್ರ ಸಲ್ಲಿಸುತ್ತಿದ್ದೇನೆ. ಈ ವೇಳೆ ನನಗೆ ಜೆಡಿಎಸ್ ನಾಯಕ ಎಚ್ ಡಿ ಕುಮಾರಸ್ವಾಮಿ ಅವರು ಸಾಥ್ ನೀಡಲಿದ್ದಾರೆ. ಇನ್ನೂ ಬಿಜೆಪಿಗೆ ಎಚ್.ಡಿ. ದೇವೇಗೌಡ ಅವರಂತಹ ದೊಡ್ಡ ನಾಯಕರ ಆಶೀರ್ವಾದ ಸಿಕ್ಕಿದೆ ಎಂದು ಹರ್ಷ ವ್ಯಕ್ತಪಡಿಸಿದರು.