ಮುಂಬೈ: ನಾನು ಗೋಮಾಂಸ ಆಗಲಿ ರೆಡ್ ಮೀಟ್ ಆಗಲಿ ಸೇವನೆ ಮಾಡುವುದಿಲ್ಲ. ನಾನು ಹೆಮ್ಮೆಯ ಹಿಂದೂ ಎಂದು ನಟಿ ಕಮ್ ರಾಜಕಾರಣಿ ಕಂಗನಾ ರಣಾವತ್ ತನ್ನ ವಿರುದ್ಧದ ವದಂತಿಗೆ ಸ್ಪಷ್ಟನೆ ನೀಡಿದರು.
"ನಾನು ಗೋಮಾಂಸ ಅಥವಾ ಇತರ ಯಾವುದೇ ರೀತಿಯ ಕೆಂಪು ಮಾಂಸವನ್ನು ಸೇವಿಸುವುದಿಲ್ಲ, ನನ್ನ ಬಗ್ಗೆ ಸಂಪೂರ್ಣವಾಗಿ ಆಧಾರರಹಿತ ವದಂತಿಗಳನ್ನು ಹರಡುತ್ತಿರುವುದು ನಾಚಿಕೆಗೇಡಿನ ಸಂಗತಿಯಾಗಿದೆ, ನಾನು ದಶಕಗಳಿಂದ ಯೋಗ ಮತ್ತು ಆಯುರ್ವೇದ ಜೀವನ ವಿಧಾನವನ್ನು ಪ್ರತಿಪಾದಿಸುತ್ತಿದ್ದೇನೆ. ಅದಲ್ಲದೆ ಅದರ ಬಗ್ಗೆ ಅರಿವನ್ನು ಮೂಡಿಸುತ್ತಿದ್ದೇನೆ. ನಾನು ಹೆಮ್ಮೆಯ ಹಿಂದೂ. ಜೈ ಶ್ರೀ ರಾಮ್ ಎಂದು ಕಂಗನಾ ಸೋಮವಾರ ಎಕ್ಸ್‌ನಲ್ಲಿ ಪೋಸ್ಟ್‌ನಲ್ಲಿ ಬರೆದುಕೊಂಡಿದ್ದಾರೆ.
ಮಂಡಿ ಲೋಕಸಭಾ ಕ್ಷೇತ್ರದ ಸ್ಪರ್ಧಿ, ನಟಿ ಕಂಗನಾ ರಣಾವತ್ ಅವರು ಗೋಮಾಂಸ ತಿನ್ನುತ್ತಾರೆ ಎಂಬ ವದಂತಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇದರ ಬಗ್ಗೆ ಸ್ಪಷ್ಟನೆ ನೀಡಿದ ನಟಿ ನನ್ನ ಬಗ್ಗೆ ಸುಳ್ಳು ಸುದ್ದಿಗಳನ್ನು ಹಬ್ಬಿಸುತ್ತಿದ್ದಾರೆ. ಆದರೆ ಇದು ಯಾವುದೇ ಪರಿಣಾಮ ಬೀರುವುದಿಲ್ಲ. ನನ್ನ ಜೀವನ ಶೈಲಿಯಲ್ಲಿ ಯೋಗ ಮತ್ತು ಆಯುರ್ವೇದವನ್ನು ಪ್ರತಿಪಾದಿಸುತ್ತಿದ್ದೇನೆ ಎಂದರು.