Select Your Language

Notifications

webdunia
webdunia
webdunia
webdunia

ಕಾಡುತ್ತಿರುವ ಬೆನ್ನುನೋವು: ಚುನಾವಣಾ ಪ್ರಚಾರದಿಂದ ಹಿಂದೆ ಸರಿದ ಬಿಜೆಪಿ ನಾಯಕಿ ಖುಷ್ಬೂ ಸುಂದರ್

LokhSabha Election 2024

Sampriya

ಚೆನ್ನೈ , ಸೋಮವಾರ, 8 ಏಪ್ರಿಲ್ 2024 (14:23 IST)
Photo Courtesy X
ಚೆನ್ನೈ: ಅನಾರೋಗ್ಯದ ಹಿನ್ನೆಲೆ ಲೋಕಸಭಾ ಚುನಾವಣೆ ಪ್ರಚಾರದಲ್ಲಿ ಭಾಗವಹಿಸಲು ಸಾಧ್ಯವಾಗುತ್ತಿಲ್ಲ ಎಂದು ಬಿಜೆಪಿ ನಾಯಕಿ, ನಟಿ ಖುಷ್ಭೂ ಸುಂದರ್‌ ಅವರು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾಗೆ ಪತ್ರ ಬರೆದಿದ್ದಾರೆ.

ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಅವರಿಗೆ ಪತ್ರ ಬರೆದಿರುವ ಖುಷ್ಬೂ ಅವರು, '2019ರಲ್ಲಿ ಮೂಳೆ ಮುರಿತ ಅನುಭವಿಸಿದ್ದೆ, ಅದರ ನೋವು ಕಳೆದ ಐದು ವರ್ಷಗಳಿಂದ ನನ್ನನ್ನು ಕಾಡುತ್ತಿದೆ. ಹೀಗಾಗಿ ಹೆಚ್ಚು ಹೊತ್ತು ಕುಳಿತುಕೊಳ್ಳುವಂತಿಲ್ಲ, ಅಲ್ಲದೆ ದೂರದ ಪ್ರಯಾಣ ಮಾಡುವಂತಿಲ್ಲ, ಆದರೆ ಇವರೆಡು ಚುನಾವಣಾ ಪ್ರಚಾರ ಕಾರ್ಯಕ್ಕೆ ಮುಖ್ಯ. ಆದ್ದರಿಂದ ಈ ಬಾರಿಯ ಪ್ರಚಾರ ಕಾರ್ಯದಲ್ಲಿ ಭಾಗಿಯಾಗುತ್ತಿಲ್ಲ' ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ಖುಷ್ಬೂ ಅವರು ವೈದ್ಯರ ಸಲಹೆಯ ಹೊರತಾಗಿಯೂ ಕೆಲವು ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದು, ಆರೋಗ್ಯ ಮತ್ತಷ್ಟು ಹದಗೆಡಲು ಕಾರಣವಾಗಿದೆ. ವೈದ್ಯರು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಲು ಸೂಚಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

2020ರಲ್ಲಿ ಬಿಜೆಪಿ ಸೇರಿದ್ದ ನಟಿ ಖುಷ್ಬೂ ಅವರನ್ನು 2021ರಲ್ಲಿ ಭಾರತೀಯ ಜನತಾ ಪಕ್ಷವು ತಮಿಳುನಾಡು ವಿಧಾನಸಭೆ ಚುನಾವಣೆಗೆ ಚೆನ್ನೈನ ಥೌಸ್ ಲೈಟ್ಸ್ ಕ್ಷೇತ್ರದಿಂದ ಖುಷ್ಬು ಅವರನ್ನು ಕಣಕ್ಕಿಳಿಸಿತ್ತು. ಆದರೆ  ಅವರು ದ್ರಾವಿಡ ಮುನ್ನೇತ್ರ ಕಳಗಂನ ಎಜಿಲನ್ ಎನ್ ವಿರುದ್ಧ 32,200 ಮತಗಳ ಅಂತರದಿಂದ ಸೋತರು.

Share this Story:

Follow Webdunia kannada

ಮುಂದಿನ ಸುದ್ದಿ

ರಂಗೇರಿದ ಚುನಾವಣಾ ಅಖಾಡ: 14 ರಂದು ಬೆಂಗಳೂರಿನಲ್ಲಿ ಮೋದಿ ರೋಡ್‌ ಶೋ