ಶಿವಮೊಗ್ಗ: ಮಾಜಿ ಮುಖ್ಯಮಂತ್ರಿ ಬಂಗಾರಪ್ಪ ಅವರು, ಅಶಕ್ತರಿಗೆ ಶಕ್ತಿಯಾಗಿ ನಿಂತು, ಆಶ್ರಯ ಬಡಾವಣೆ ನಿವಾಸಿಗಳಿಗೆ ಮನೆ ನಿರ್ಮಾಣ ಮಾಡಿಕೊಟ್ಟಿದ್ದರು. ಅವರು ನಡೆದ ದಾರಿಯಲ್ಲೇ ನಾನು ಸಾಗುತ್ತೇನೆಂದು ಶಿವಮೊಗ್ಗ ಕಾಂಗ್ರೆಸ್ ಅಭ್ಯರ್ಥಿ ಗೀತಾ ಶಿವರಾಜಕುಮಾರ್ ಹೇಳಿದರು.
ಇಲ್ಲಿನ ವಿನೋಬನಗರದ ಶ್ರೀರಾಮ ನಗರ ನಿವಾಸಿಗಳಿಂದ ಆಯೋಜಿಸಿದ್ದ 'ನವ ಸಂವತ್ಸರದ ಸಂಭ್ರಮದಲ್ಲಿ ಗೀತಕ್ಕ, ಶಿವಣ್ಣ ನಮ್ಮೊಂದಿಗೆ' ಶೀರ್ಷಿಕೆಯಡಿಯ ಸನ್ಮಾನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಇನ್ನೂ ಚುನಾವಣೆ ಬಂತೆಂದು ರಾಜಕೀಯ ಭಾಷಣ ಮಾಡುವುದಕ್ಕಿಂತ ಜನ ಸಾಮಾನ್ಯರಿಗೆ ಹತ್ತಿರವಿದ್ದು, ಅವರ ಸೇವೆ ಮೂಲಕ ಹತ್ತಿರವಾದರೆ ಸಾಕು ಎಂದರು.
ನಟ ಶಿವರಾಜಕುಮಾರ್ ಮಾತನಾಡಿ, ಜಿಲ್ಲೆಯ ಶಕ್ತಿಯಾಗಿ ಪತ್ನಿ ಗೀತಾ ಶಿವರಾಜಕುಮಾರ್ ಇರಲಿದ್ದಾರೆ. ಚುನಾವಣೆಯಲ್ಲಿ ಮತ ನೀಡಿ ಆಶೀರ್ವದಿಸಿ ಗೆಲ್ಲಿಸಿ ಎಂದು ಕೋರಿದರು.