Select Your Language

Notifications

webdunia
webdunia
webdunia
webdunia

ಮನೆಯಲ್ಲಿ ಆಟವಾಡುತ್ತಿದ್ದ ಮಗು ಬಾಟಲ್ ಮುಚ್ಚಳ ನುಂಗಿ ಸಾವು

ಮನೆಯಲ್ಲಿ ಆಟವಾಡುತ್ತಿದ್ದ ಮಗು ಬಾಟಲ್ ಮುಚ್ಚಳ ನುಂಗಿ ಸಾವು

Sampriya

ಶಿವಮೊಗ್ಗ , ಭಾನುವಾರ, 8 ಸೆಪ್ಟಂಬರ್ 2024 (13:48 IST)
Photo Courtesy X
ಶಿವಮೊಗ್ಗ: ಜ್ಯೂಸ್ ಬಾಟಲ್ ಮುಚ್ಚಳ ನುಂಗಿ ಉಸಿರಾಟದ ತೊಂದರೆಯಿಂದ ಒಂದೂವರೆ ವರ್ಷದ ಮಗು ಸಾವನ್ನಪ್ಪಿದ ಘಟನೆ ಶಿವಮೊಗ್ಗದ ಶಿಕಾರಿಪುರ ತಾಲ್ಲೂಕಿನ ಹರಗುವಳ್ಳಿ ಗ್ರಾಮದಲ್ಲಿ ನಡೆದಿದೆ.

ಮನೆಯಲ್ಲಿ ಮಗು ಆಟವಾಡುವ ವೇಳೆ ಮಗುವಿಗೆ ಜ್ಯೂಸ್ ಬಾಟಲ್ ಸಿಕ್ಕಿದ್ದು, ಈ ವೇಳೆ ಮಗು ಆಟವಾಡುತ್ತವೇ ಬಾಟಲ್ ಮುಚ್ಚಳವನ್ನು ಬಾಯಿಗೆ ಹಾಕಿಕೊಂಡಿದೆ. ಈ ವೇಳೆ ಬಾಟಲ್ ಮುಚ್ಚಳ ಮಗುವಿನ ಗಂಟಲಲ್ಲಿ ಸಿಕ್ಕಿಹಾಕಿಕೊಂಡಿದ್ದು, ಈ ವೇಳೆ ಉಸಿರಾಡಲು ಮಗು ಕಷ್ಟ ಪಟ್ಟು, ಕೊನೆಯುಸಿರೆಳೆದಿದೆ.

ಜ್ಯೂಸ್ ಬಾಟಲಿ ಹಿಡಿದುಕೊಂಡು ಮಗು ಆಟವಾಡುತ್ತಿದ್ದ ವೇಳೆ ಈ ದುರ್ಘಟನೆ ನಡೆದಿದೆ. ಬಾಟಲ್ ಮುಚ್ಚಳ ನುಂಗಿ, ಉಸಿರಾಟಲು ಮಗು ಒದ್ದಾಡುತ್ತಿರುವುದನ್ನು ಪೋಷಕರು ನೋಡಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಯಾವುದೇ ಪ್ರಯೋಜನವಾಗಿಲ್ಲ. ಆದಾಗಲೇ ಮಗು ಸಾವನ್ನಪ್ಪಿತ್ತು ಎಂದು ಕುಟುಂಬಸ್ಥರು ತಿಳಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಈ ಜಿಲ್ಲೆಗಳಲ್ಲಿ ಇಂದು ಭಾರೀ ಮಳೆ ಸಾಧ್ಯತೆ, ಯೆಲ್ಲೋ ಅಲರ್ಟ್ ಘೋಷಣೆ