Select Your Language

Notifications

webdunia
webdunia
webdunia
webdunia

ಮದುವೆಯಾಗು ಎಂದಿದ್ದಕ್ಕೆ ಪ್ರೀತಿಸಿದ ಯುವತಿಯನ್ನೇ ಮುಗಿಸಿದ ಪಾಪಿ

Shivmogga Crime Case

Sampriya

ಶಿವಮೊಗ್ಗ , ಬುಧವಾರ, 24 ಜುಲೈ 2024 (16:10 IST)
ಶಿವಮೊಗ್ಗ: ಪ್ರೀತಿಸಿದ ಯುವತಿ ಮದುವೆಯಾಗು ಎಂದು ಒತ್ತಾಯಿಸಿದ್ದಕ್ಕೆ ಆಕೆಯನ್ನು ಪ್ರಿಯತಮ ಕೊಲೆ ಮಾಡಿ, ಹೂತು ಹಾಕಿರುವ ಭೀಕರ ಘಟನೆ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲ್ಲೂಕಿನ ಹೆದ್ದಾರಿಪುರ ಗ್ರಾಮದಲ್ಲಿ ನಡೆದಿದೆ.

ಕಳೆದ ಎರಡೂವರೆ ವರ್ಷದಿಂದ ಪ್ರೀತಿಸುತ್ತಿದ್ದ ಸೌಳ್ಯನ್ನು ಪ್ರಿಯತಮ ಸೃಜನ್ ಎಂಬಾತ ಕೊಲೆ ನಡೆಸಿದ್ದಾನೆ.  ಕೊಲೆಯಾದ ಯುವತಿ ಚಿಕ್ಕಮಗಳೂರು ಜಿಲ್ಲೆಯ ಕೊಪ್ಪದವಳಾಗಿದ್ದು ಕೊಲೆ ಆರೋಪಿ ಸೃಜನ್ ಶಿವಮೊಗ್ಗ ಜಿಲ್ಲೆಯ ಸಾಗರ ಮೂಲದವನಾಗಿದ್ದಾನೆ. ಇದೀಗ ಕೊಲೆ ಪ್ರಕರಣವನ್ನು ಭೇದಿಸಿರುವ ಪೊಲೀಸರು ಸೃಜನ್‌ನನ್ನು ವಶಕ್ಕೆ ಪಡೆದಿದ್ದಾರೆ.

ಪ್ರೀತಿಸಿದ ಯುವತಿ ಪದೇ ಪದೇ ಮದುವೆಯಾಗಲು ಎಂದು ಒತ್ತಾಯಿಸಿದ್ದಕ್ಕೆ ಕೋಪಗೊಂಡ ಸೃಜನ್ ಆಕೆಯನ್ನು ಕೊಲೆ ಮಾಡಿ, ಹೂತಿಟ್ಟಿದ್ದಾನೆ. ಇನ್ನೂ ಮಗಳು ಮನೆಗೆ ವಾಪಾಸ್ಸಾಗದನ್ನು ಕಂಡು ಪೋಷಕರು ಪೊಲೀಸರಿಗೆ ನಾಪತ್ತೆ ಪ್ರಕರಣ ದೂರು ನೀಡಿದ್ದಾರೆ. ಈ ವೇಳೆ ಸೃಜನ್‌ರನ್ನು ಪೊಲೀಸರು ವಿಚಾರಿಸಿದಾಗ ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ.  ಇಂದು ಎಸಿ ಸಮ್ಮುಖದಲ್ಲಿ ಯುವತಿಯ ಶವ ಹೊರಗೆ ತೆಗೆಯಲು ಸಿದ್ದತೆ ನಡೆಯುತ್ತಿದೆ. ಸ್ಥಳದಲ್ಲಿ ಪೊಲೀಸರು ಮೊಕ್ಕಂ ಹೂಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಶಿರೂರಿನಲ್ಲಿ ಗುಡ್ಡಕುಸಿತದಿಂದ ನಾಪತ್ತೆಯಾಗಿರುವವರ ಪತ್ತೆ ಕಾರ್ಯ ಹೇಗೆ ಸಾಗುತ್ತಿದೆ