Select Your Language

Notifications

webdunia
webdunia
webdunia
webdunia

ಬಿಜೆಪಿಗೆ ಬೆಂ.ದಕ್ಷಿಣದಲ್ಲಿ ಹಣ ನೀಡಿ ಮತ ಪಡೆಯಬೇಕಾದ ದುಃಸ್ಥಿತಿ ಎದುರಾಗಿದೆ: ಕಾಂಗ್ರೆಸ್ ಅಭ್ಯರ್ಥಿ ಸೌಮ್ಯರೆಡ್ಡಿ

Sowmya Reddy

Sampriya

ಬೆಂಗಳೂರು , ಭಾನುವಾರ, 14 ಏಪ್ರಿಲ್ 2024 (15:23 IST)
Photo Courtesy X
ಬೆಂಗಳೂರು: ಕಳೆದ ಚುನಾವಣೆಯಲ್ಲಿ ಅಪಾರ ಹಣವನ್ನು ಹಂಚಿ ಗೆದ್ದ ಬೆಂಗಳೂರು ದಕ್ಷಿಣದಲ್ಲಿ ಕ್ಷೇತ್ರದಲ್ಲಿ ಜನಪರವಾದ ಅಭಿವೃದ್ಧಿ ಮಾಡದೇ ಇಂದು ಮತ್ತೆ ಹಣ ಹಂಚಿ ಮತ ಪಡೆಯಬೇಕಾದ ದುಸ್ಥಿತಿ ಬಿಜೆಪಿಗೆ ಬಂದಿದೆ ಎಂದು ಕಾಂಗ್ರೆಸ್ ಅಭ್ಯರ್ಥಿ ಸೌಮ್ಯರೆಡ್ಡಿ ಅವರು ಬಿಜೆಪಿ ವಿರುದ್ಧ ಆಕ್ರೋಶ ಹೊರಹಾಕಿದರು.

ಈ ಬಗ್ಗೆ ಎಕ್ಸ್‌ನಲ್ಲಿ ಬರೆದುಕೊಂಡಿದ್ದಾರೆ. ಕೇಂದ್ರ ಸರ್ಕಾರ ಅಧಿಕಾರ ದುರ್ಬಳಕೆ ಮಾಡಿಕೊಂಡು ಎಲೆಕ್ಟೊರಲ್ ಬಾಂಡ್ ರೂಪದಲ್ಲಿ ಲೂಟಿ ಮಾಡಿರುವ ಕಪ್ಪು ಹಣದ ಹೊಳೆಯೇ ಬೆಂಗಳೂರು ದಕ್ಷಿಣದಲ್ಲಿ ಹರಿಯಲಾರಂಭಿಸಿದೆ.

ಇದಕ್ಕೆ ಜಯನಗರದಲ್ಲಿ ಪತ್ತೆಯಾದ ಬಿಜೆಪಿಯ ಕೋಟ್ಯಂತರ ರೂಪಾಯಿ ದಾಖಲೆರಹಿತ ನಗದು ಸಾಕ್ಷಿ.

ಈ ಹಣವನ್ನು ಪ್ರಧಾನಿಯವರ ಬೆಂಗಳೂರು ಚುನಾವಣೆ ಕಾರ್ಯಕ್ರಮಕ್ಕೆ ಜನರನ್ನು ಸೇರಿಸಲು ಕೊಂಡೊಯ್ಯಲಾಗುತ್ತಿತ್ತೇ?

ಹಣ ಕಳೆದುಕೊಂಡ ಹತಾಶೆಯಲ್ಲಿ @BJP4Karnataka
 ದವರು @INCKarnataka
 ಬಗ್ಗೆ ಮಾಡುತ್ತಿರುವ ಆಧಾರ ರಹಿತ ಆರೋಪ ಮಾನ ಉಳಿಸಿಕೊಳ್ಳುವ ಕೊನೆ ಪ್ರಯತ್ನದಂತೆ ಕಾಣುತ್ತಿದೆ.

ಕಳೆದ ಚುನಾವಣೆಯಲ್ಲಿ ಅಪಾರ ಹಣವನ್ನು ಹಂಚಿ ಗೆದ್ದು, ಕ್ಷೇತ್ರದಲ್ಲಿ ಜನಪರವಾದ ಅಭಿವೃದ್ಧಿ ಮಾಡದೇ ಇಂದು ಮತ್ತೆ ಹಣ ಹಂಚಿ ಮತ ಪಡೆಯಬೇಕಾದ ದುಸ್ಥಿತಿ ಬಿಜೆಪಿಗೆ ಬಂದಿದೆ.

ನಮ್ಮ ಗ್ಯಾರಂಟಿ ಯೋಜನೆಗಳು, ಜನಪರ ಕಾರ್ಯಕ್ರಮಗಳು ರಾಜ್ಯದ ಮನೆ ಮನೆಗೆ ತಲುಪಿದೆ. ಇದರಿಂದ ಇಡೀ ಕರ್ನಾಟಕದಲ್ಲಿ ಕಾಂಗ್ರೆಸ್ ಪರವಾದ ಗಾಳಿ ಬೀಸುತ್ತಿದೆ.

ಸೋಲಿನ ಭಯದಿಂದ ಕಂಗೆಟ್ಟಿರುವ ಬಿಜೆಪಿ ಹಣದ ಮೂಲಕ ಬೆಂಗಳೂರು ದಕ್ಷಿಣದಲ್ಲಿ ಚುನಾವಣೆ ಗೆಲ್ಲಬೇಕು ಎಂದು ನಿರ್ಧರಿಸಿದ್ದರೂ ಮತದಾರರು ಭ್ರಷ್ಟ ಹಣಕ್ಕೆ ಮರುಳಾಗುವುದಿಲ್ಲ ಎನ್ನುವ ನಂಬಿಕೆ ನನಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಸಂವಿಧಾನಕ್ಕೆ ಆರ್‌ಸ್ಸೆಸ್ಸೆನಿಂದ ಅಪಾಯವಿದೆ: ಸಿಎಂ ಸಿದ್ದರಾಮಯ್ಯ