Select Your Language

Notifications

webdunia
webdunia
webdunia
webdunia

ಜನರ ಮೇಲೆ 'ಶಕ್ತಿ' ಅಸ್ತ್ರ ಬೀಸಿದ ಮೋದಿ, ಬಿಜೆಪಿ ಪ್ರಣಾಳಿಕೆಯಲ್ಲಿ ಜನರಿಗೆ ನೀಡಿದ ಭರವಸೆ ಏನು?

ಜನರ ಮೇಲೆ 'ಶಕ್ತಿ' ಅಸ್ತ್ರ ಬೀಸಿದ ಮೋದಿ, ಬಿಜೆಪಿ ಪ್ರಣಾಳಿಕೆಯಲ್ಲಿ ಜನರಿಗೆ ನೀಡಿದ ಭರವಸೆ ಏನು?

Sampriya

ಬೆಂಗಳೂರು , ಭಾನುವಾರ, 14 ಏಪ್ರಿಲ್ 2024 (10:58 IST)
Photo Courtesy X
ಬೆಂಗಳೂರು:  ಲೋಕಸಭಾ ಚುನಾವಣೆಯಲ್ಲಿ ಈ ಬಾರಿಯ ಅಧಿಕಾರ ಚುಕ್ಕಾಣಿಯನ್ನು ಹಿಡಿಯಬೇಕೆಂಬ ಸಂಕಲ್ಪದಲ್ಲಿರುವ ಆಡಳಿತರೂಢ ಬಿಜೆಪಿ ಸರ್ಕಾರ ಇಂದು ಸಂಕಲ್ಪ ಪತ್ರವನ್ನು ಬಿಡುಗಡೆ ಮಾಡಿತು.

ಪಕ್ಷದ ಪ್ರಧಾನ ಕಚೇರಿಯಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರು ಬಿಡುಗಡೆ ಮಾಡಿದರು.  

ನಂತರ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ಅವರು, ದೇಶದ ಎಲ್ಲರಿಗೂ ಉಪಯೋಗವಾಗುವಂತಹ ಪ್ರಣಾಳಿಕೆಯನ್ನು ಬಿಡುಗಡೆಮಾಡಲಾಗಿದೆ. ಜನರಿಗೆ ಹೊಸ ಬದುಕು ಕಟ್ಟಿಕೊಳ್ಳುವ ಭರವಸೆಯನ್ನು ಈ ಮೂಲಕ ನೀಡುತ್ತೇನೆ ಎಂದರು.  

ಅದಲ್ಲದೆ ದೇಶದಲ್ಲಿ 20ಕ್ಕೂ ಹೆಚ್ಚು ನಗರಗಳಲ್ಲಿ ಮೆಟ್ರೋ ಪರಿಚಯ,  6ಜಿ ನೆಟ್‌ವರ್ಕ. ಯುವಶಕ್ತಿ, ನಾರಿಶಕ್ತಿ, ರೈತ ಶಕ್ತಿ ಮೂಲಕ ಹೊಸ ಭರವಸೆಗಳನ್ನು ನೀಡಿದರು. ಮುಂದಿನ 5 ವರ್ಷಕ್ಕೆ ಉಚಿತ ಪಡಿತರ, ಉದ್ಯೋಗ ಸೃಷ್ಟಿ, ವಂದೇ ಭಾರತ್‌ನಡಿಯಲ್ಲಿ ರೈಲು ಮತ್ತಷ್ಟು ವಿಸ್ತರಣೆ. ದಕ್ಷಿಣ, ಉತ್ತರ ಭಾರತ ಹಾಗೂ ಪೂರ್ವದಲ್ಲಿ ಬುಲೆಟ್‌ ಟ್ರೈನ್‌ ಆರಂಭ, ವಂದೇ ಭಾರತ್ ಮಾದರಿಯ ಮೆಟ್ರೋ ರೈಲುಗಳ ಪ್ರಾರಂಭ.  ಮನೆ ಮನೆಗೆ ಗ್ಯಾಸ್‌ ಕನೆಕ್ಷನ್. ಮುದ್ರಾ ಯೋಜನೆ ನೀಡುತ್ತಿದ್ದ ಸಾಲದ ಮಿತಿ ಹೆಚ್ಚಳ ಮಾಡಲಾಗುವುದು ಎಂದರು.

Share this Story:

Follow Webdunia kannada

ಮುಂದಿನ ಸುದ್ದಿ

ಇಸ್ರೇಲ್‌- ಇರಾನ್ ನಡುವೆ ಉದ್ವಿಗ್ನ ಪರಿಸ್ಥಿತಿ, ಇಸ್ರೇಲ್‌ನಲ್ಲಿ ಭಾರತೀಯರು ಎಚ್ಚರದಲ್ಲಿರಿ ಎಂದ ಭಾರತ