Select Your Language

Notifications

webdunia
webdunia
webdunia
webdunia

ಬೆನ್ನಿಗೆ ನಿಂತವರಿಗೆ ದ್ರೋಹ ಮಾಡಲ್ಲ, ನಾಮಪತ್ರ ವಾಪಸ್ ಪಡೆಯುವುದಿಲ್ಲ: ಕೆ ಎಸ್‌ ಈಶ್ವರಪ್ಪ

ಬೆನ್ನಿಗೆ ನಿಂತವರಿಗೆ ದ್ರೋಹ ಮಾಡಲ್ಲ, ನಾಮಪತ್ರ ವಾಪಸ್ ಪಡೆಯುವುದಿಲ್ಲ: ಕೆ ಎಸ್‌ ಈಶ್ವರಪ್ಪ

Sampriya

ಶಿವಮೊಗ್ಗ , ಭಾನುವಾರ, 14 ಏಪ್ರಿಲ್ 2024 (12:26 IST)
ಶಿವಮೊಗ್ಗ: ನನ್ನ ಬೆನ್ನಿಗೆ ನಿಂತವರಿಗೆ ನಾನು ಯಾವತ್ತೂ ದ್ರೋಹ ಬಗೆಯುವುದಿಲ್ಲ. ಯಾವುದೇ ಕಾರಣಕ್ಕೂ ನಾಮಪತ್ರ ವಾಪಸ್ ಪಡೆಯುವುದಿಲ್ಲ ಎಂದು ಬಿಜೆಪಿ ಬಂಡಾಯ ನಾಯಕ, ಮಾಜಿ ಉಪಮುಖ್ಯಮಂತ್ರಿ ಕೆ ಎಸ್ ಈಶ್ವರಪ್ಪ ಹೇಳಿದರು.

ಈ ಮೂಲಕ ಬಿಜೆಪಿ ಬಂಡಾಯ ನಾಯಕ ಮತ್ತು ಮಾಜಿ ಉಪ ಮುಖ್ಯಮಂತ್ರಿ ಕೆ ಎಸ್ ಈಶ್ವರಪ್ಪ ಅವರು ನಾಮಪತ್ರ ಹಿಂಪಡೆಯುತ್ತಾರೆಂಬ ವದಂತಿಗಳಿಗೆ ಸ್ಪಷ್ಟನೆ ನೀಡಿದರು.

ಶಿವಮೊಗ್ಗ ಲೋಕಸಭಾ ಕ್ಷೇತ್ರದಿಂದ ಸ್ವತಂತ್ರ ಅಭ್ಯರ್ಥಿಯಾಗಿ ಈಶ್ವರಪ್ಪ ಶುಕ್ರವಾರ ನಾಮಪತ್ರ ಸಲ್ಲಿಸಿದ್ದು ಬಿಜೆಪಿಯ ಹಾಲಿ ಸಂಸದ ಮತ್ತು ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರ ಹಿರಿಯ ಪುತ್ರ ಬಿ ವೈ ರಾಘವೇಂದ್ರ ಮತ್ತು ಕಾಂಗ್ರೆಸ್ ಅಭ್ಯರ್ಥಿ ಗೀತಾ ಶಿವರಾಜಕುಮಾರ್ ವಿರುದ್ಧ ಕಣಕ್ಕಿಳಿದಿದ್ದಾರೆ.

ಪುತ್ರ ಕಾಂತೇಶ್‌ಗೆ ಹಾವೇರಿ ಬಿಜೆಪಿ ಟಿಕೆಟ್‌ ನೀಡದ್ದರಿಂದ ಕೋಪಗೊಂಡಿದ್ದ ಈಶ್ವರಪ್ಪ ಅವರು ಬಿಜೆಪಿ ಹಿರಿಯ ನಾಯಕ ಬಿಎಸ್‌ ಯಡಿಯೂರಪ್ಪ ಹಾಗೂ ರಾಜ್ಯಾಧ್ಯಕ್ಷ ವೈ ಬಿ ವಿಜಯೇಂದ್ರ ವಿರುದ್ಧ ತಮ್ಮ ಅಸಮಾಧಾನವನ್ನು ಹೊರಹಾಕಿದ್ದರು.

ಈ ನಡುವೆ ಅಮಿತ್ ಶಾ ಅವರು ಕರೆ ಮಾಡಿ ಈಶ್ವರಪ್ಪ ಬಳಿ ಮಾತುಕತೆ ನಡೆಸಿ, ಮಾತುಕತೆಗೆ ದೆಹಲಿ ಕರೆಸಿಕೊಂಡಿದ್ದರು. ಆದರೆ ಶಾ ಅವರು ಭೇಟಿಗೆ ಅವಕಾಶ ನೀಡದೆ ನನ್ನ ಸ್ಪರ್ಧೆಗೆ ಅವರು ಗ್ರೀನ್ ಸಿಗ್ನಲ್ ನೀಡಿದ್ದಾರೆಂದು ಈಶ್ವರಪ್ಪ ಹೇಳಿದ್ದರು. ಇನ್ನೂ ಯಾವುದೇ ಕಾರಣಕ್ಕೂ ಕಣದಿಂದ  ವಾಪಾಸ್ಸಾಗುವುದಿಲ್ಲ ಎಂದಿದ್ದರು.

ಅವರು ಇನ್ನೂ ಕಾಲ ಮಿಂಚಿಲ್ಲ ನೀವು ಮತ್ತೇ ವಾಪಾಸ್ ನಮ್ಮ ಜತೆ ಬನ್ನಿ ಈಶ್ವರಪ್ಪನವರೇ. ನಿಮ್ಮ ಅವಶ್ಯಕತೆ ನಮಗಿದೆ ಎಂದು ವಿಜಯೇಂದ್ರ  ಹೇಳಿದ್ದರು.

ಆದರೆ ಈಶ್ವರಪ್ಪ ಅವರು ಈಚೆಗೆ ನಾಮಪತ್ರ ಸಲ್ಲಿಸಿದ್ದರು. ಇದೀಗ ರಾಜಕೀಯ ವಲಯದಲ್ಲಿ ನಾಮಪತ್ರ ವಾಪಸ್ ಪಡೆಯಲಿದ್ದಾರೆಂಬ ಸುದ್ದಿಗೆ ಈಶ್ವರಪ್ಪ ಪ್ರತಿಕ್ರಿಯಿಸಿ, ಯಾವುದೇ ಕಾರಣಕ್ಕೂ ಕಣದಿಂದ ವಾಪಾಸ್ಸಾಗುವ ಮಾತೇ ಇಲ್ಲ ಎಂದು ಹೇಳಿದ್ದರು.

ಈ ಹಿನ್ನೆಲೆಯಲ್ಲಿ ಸ್ಪಷ್ಟನೆ ನೀಡಿರುವ ಈಶ್ವರಪ್ಪ ಅವರು, ಪ್ರಧಾನಿ ಮೋದಿ ಅವರನ್ನು ಬಲಗೊಳಿಸುವುದು ನನ್ನ ಗುರಿಯಾಗಿದೆ. ನಾನು ನಾಮಪತ್ರ ಹಿಂಪಡೆಯುತ್ತೇನೆ ಎಂದು ಕೆಲವರು ವದಂತಿ ಹಬ್ಬಿಸುತ್ತಿದ್ದಾರೆ, ನನ್ನ ಬೆನ್ನಿಗೆ ನಿಂತವರಿಗೆ ನಾನು ಯಾವತ್ತೂ ದ್ರೋಹ ಬಗೆಯುವುದಿಲ್ಲ. ಯಾವುದೇ ಕಾರಣಕ್ಕೂ ನಾಮಪತ್ರ ವಾಪಸ್ ಪಡೆಯುವುದಿಲ್ಲ ಎಂದು ಹೇಳಿದ್ದಾರೆ.


Share this Story:

Follow Webdunia kannada

ಮುಂದಿನ ಸುದ್ದಿ

ಇರಾನ್ ದಾಳಿ ಬೆನ್ನಲ್ಲೇ ಇಸ್ರೇಲ್ ಮನವಿಯಂತೆ ತುರ್ತು ಸಭೆ ಕರೆದ ವಿಶ್ವಸಂಸ್ಥೆ