Select Your Language

Notifications

webdunia
webdunia
webdunia
webdunia

ಕಾಂಗ್ರೆಸ್‌ನಲ್ಲಿ ಹೆಚ್ಚಿದ ಗದ್ದುಗೆ ಗುದ್ದಾಟ: ನಾನೂ ಸಿಎಂ ಆಕಾಂಕ್ಷಿ ಎಂದ ಬಸವರಾಜ ರಾಯರಡ್ಡಿ

ಕಾಂಗ್ರೆಸ್‌ನಲ್ಲಿ ಹೆಚ್ಚಿದ ಗದ್ದುಗೆ ಗುದ್ದಾಟ: ನಾನೂ ಸಿಎಂ ಆಕಾಂಕ್ಷಿ ಎಂದ ಬಸವರಾಜ ರಾಯರಡ್ಡಿ

Sampriya

ಕೊಪ್ಪಳ , ಸೋಮವಾರ, 9 ಸೆಪ್ಟಂಬರ್ 2024 (15:12 IST)
Photo Courtesy X
ಕೊಪ್ಪಳ: ರಾಜ್ಯದಲ್ಲಿ ಮುಖ್ಯಮಂತ್ರಿ ಗದ್ದುಗೆಗೆ ಗುದ್ದಾಟ ಜೋರಾಗುತ್ತಿದೆ. ಕಾಂಗ್ರೆಸ್‌ ನಾಯಕರು ಪೈಪೋಟಿಗೆ ಬಿದ್ದವರಂತೆ ಹೇಳಿಕೆಯ ಮೇಲೆ ಹೇಳಿಕೆ ನೀಡುತ್ತಿದ್ದಾರೆ. ಇದೀಗ ಮುಖ್ಯಮಂತ್ರಿ ಅವರ ಆರ್ಥಿಕ ಸಲಹೆಗಾರ ಬಸವರಾಜ ರಾಯರೆಡ್ಡಿ ಅವರ ಸರದಿ.

ರಾಜ್ಯದಲ್ಲಿ ಮುಖ್ಯಮಂತ್ರಿ ಆಗಬೇಕು ಎಂದು ಕೆಲವರು ಆಸೆ ಪಡುತ್ತಿದ್ದಾರೆ. ಆ ಹುದ್ದೆ ಖಾಲಿಯಿಲ್ಲ. ಆದರೆ ಬೇರೆಯವರಿಗೆ ಸಿ.ಎಂ. ಸ್ಥಾನ ಕೊಡುವುದಾದರೆ ನಾನೂ ಆಕಾಂಕ್ಷಿ. ಕಲ್ಯಾಣ ಕರ್ನಾಟಕ ಭಾಗಕ್ಕೆ ಸಿ.ಎಂ. ಸ್ಥಾನ ಕೊಡುವುದಾದರೆ ನಾನೇ ಮುಂಚೂಣಿಯಲ್ಲಿರುವೆ ಎಂದು ರಾಯರೆಡ್ಡಿ ಹೇಳಿದರು.

ಸಿದ್ದರಾಮಯ್ಯ ಮುಂದಿನ ಮೂರೂವರೆ ವರ್ಷ ಸಿ.ಎಂ. ಆಗಿರಬೇಕು. ಆಗಮಾತ್ರ ರಾಜ್ಯ ಅಭಿವೃದ್ಧಿ ಆಗುತ್ತದೆ. ಅವರೇ ಮುಂದುವರೆಯಬೇಕು ಅಂತ ನಮ್ಮ ಆಸೆಯಿದೆ. ಸಿದ್ದರಾಮಯ್ಯ ತಮ್ಮ ಸ್ಥಾನದಿಂದ ಕೆಳಗೆ ಇಳಿಯುತ್ತಾರೆ ಎಂದು ನಿಮಗೆ ಹೇಳಿದವರು ಯಾರು ಎಂದು ಮಾಧ್ಯಮದವರನ್ನು ಪ್ರಶ್ನಿಸಿದರು.

ಆರ್.ವಿ. ದೇಶಪಾಂಡೆ ಮುಖ್ಯಮಂತ್ರಿ ಸ್ಥಾನ ಕುರಿತು ನೀಡಿದ ಹೇಳಿಕೆಯಲ್ಲಿ ತಪ್ಪೇನೂ ಇಲ್ಲ. ನಾನು ಕೂಡ ಲಿಂಗಾಯತ ನಾಯಕ. ಬಿ.ಆರ್. ಪಾಟೀಲ ಹಾಗೂ‌ ನಾನು ಹಿರಿಯರಿದ್ದೇವೆ. ನಾನು ಸಿಎಂ ಯಾಕೆ ಆಗಬಾರದು, ನಮ್ಮ ಪಕ್ಷ ಲಿಂಗಾಯತ ಸಮುದಾಯಕ್ಕೆ ಕೊಡುವುದಾದರೆ ನನಗೆ ಸ್ಥಾನ ನೀಡಲಿ ಎಂದು ಹೇಳಿದರು.

Share this Story:

Follow Webdunia kannada

ಮುಂದಿನ ಸುದ್ದಿ

ಸರ್ಕಾರ ಏನೇ ಮಾಡಿದರೂ ಕಳ್ಳನ ಹೆಂಡತಿ ಡ್ಯಾಶ್ ಡ್ಯಾಶ್: ಸಿ.ಟಿ. ರವಿ ವ್ಯಂಗ್ಯ