ನವದೆಹಲಿ: ಪಹಲ್ಗಾಮ್ ದಾಳಿಯನ್ನು ಪಾಕಿಸ್ತಾನದವರೇ ಮಾಡಿದ್ದಾರೆ ಎನ್ನುವುದಕ್ಕೆ ಪ್ರೂಫ್ ಎಲ್ಲಿದೆ, ಅದನ್ನು ನಮ್ಮ ದೇಶದೊಳಗಿನ ಯವಕರೇ ಮಾಡಿರಬಹುದಲ್ವೇ ಎಂದು ವಿವಾದಿತ ಹೇಳಿಕೆ ನೀಡಿದ್ದ ಕಾಂಗ್ರೆಸ್ ನಾಯಕ ಪಿ ಚಿದಂಬರಂಗೆ ಇಂದು ಲೋಕಸಭೆಯಲ್ಲಿ ಗೃಹಸಚಿವ ಅಮಿತ್ ಶಾ ಬೆವರಿಳಿಸಿದ್ದಾರೆ.
ಏಪ್ರಿಲ್ ನಲ್ಲಿ ಪಹಲ್ಗಾಮ್ ನಲ್ಲಿ ನಡೆದ ದಾಳಿಯಲ್ಲಿ ಪಾಕಿಸ್ತಾನದ ಕೈವಾಡವಿದೆ ಎನ್ನುವುದಕ್ಕೆ ಅನೇಕ ಸಾಕ್ಷ್ಯಗಳು ಸಿಕ್ಕಿದ್ದವು. ಹಾಗಿದ್ದರೂ ಪಾಕಿಸ್ತಾನದವರೇ ಮಾಡಿದ್ದಾರೆ ಎನ್ನುವುದಕ್ಕೆ ಸಾಕ್ಷ್ಯ ಏನಿದೆ ಎಂದು ಪ್ರಶ್ನೆ ಮಾಡಿದ್ದರು. ಅವರ ಹೇಳಿಕೆ ಭಾರೀ ಟೀಕೆಗೆ ಗುರಿಯಾಗಿತ್ತು.
ಇಂದು ಲೋಕಸಭೆಯಲ್ಲಿ ಆಪರೇಷನ್ ಸಿಂಧೂರ್ ಕುರಿತಾದ ಚರ್ಚೆ ನಡೆಯುತ್ತಿದೆ. ಇಂದು ಗೃಹಸಚಿವ ಅಮಿತ್ ಶಾ ಆಪರೇಷನ್ ಸಿಂಧೂರ್ ಯಶಸ್ಸಿನ ಕುರಿತು ಮಾತನಾಡುತ್ತಿದ್ದರು. ಈ ವೇಳೆ ಚಿದಂಬರಂ ಹೇಳಿಕೆಯನ್ನು ಉಲ್ಲೇಖಿಸಿ ತರಾಟೆಗೆ ತೆಗೆದುಕೊಂಡಿದ್ದಾರೆ.
ಭಯೋತ್ಪಾದನೆ ಬಗ್ಗೆ ಸಂಸತ್ ನಲ್ಲಿ ಚರ್ಚೆ ನಡೆಯುವ ಹೊತ್ತಿನಲ್ಲಿ ಚಿದಂಬರಂ ಭಾರತದ ಪರವಾಗಿ ನಿಲ್ಲುವುದರ ಬದಲು ಪಾಕಿಸ್ತಾನದ ಪರವಾಗಿ ನಿಂತು ಮಾತನಾಡಿದ್ದಾರೆ. ನಮಗೆ ರೈಫಲ್, ಚಾಕಲೇಟ್ ಮಾತ್ರವಲ್ಲದೆ, ಪಾಕಿಸ್ತಾನದ ಐಡಿ ಕಾರ್ಡ್ ಕೂಡಾ ಸಿಕ್ಕಿತ್ತು. ಹಾಗಿದ್ದರೂ ಮಾಜಿ ಗೃಹಮಂತ್ರಿಗಳು ಪಾಕಿಸ್ತಾನವೇ ಮಾಡಿದ್ದು ಎನ್ನುವುದಕ್ಕೆ ಸಾಕ್ಷಿ ಏನಿದೆ ಎಂದು ಪ್ರಶ್ನೆ ಮಾಡುತ್ತಾರೆ. ನಾಚಿಕೆಯಾಗಬೇಕು. ಭಾರತ ಯಾವತ್ತೂ ಭಯೋತ್ಪಾದಕರ ಬಗ್ಗೆ ಅನುಕಂಪ ವ್ಯಕ್ತಪಡಿಸುವುದನ್ನು ಸಹಿಸುವುದಿಲ್ಲ ಎಂದು ರೋಷಾವೇಷದಿಂದ ಮಾತನಾಡಿದ್ದಾರೆ.