Select Your Language

Notifications

webdunia
webdunia
webdunia
webdunia

ರಾಜಕೀಯ ನಿವೃತ್ತಿ ಬಳಿಕ ಅಮಿತ್ ಶಾ ಏನು ಮಾಡ್ತಾರೆ: ಪ್ಲ್ಯಾನ್ ರಿವೀಲ್

Amit Shah

Krishnaveni K

ಅಹ್ಮದಾಬಾದ್ , ಬುಧವಾರ, 9 ಜುಲೈ 2025 (20:34 IST)
ಅಹ್ಮದಾಬಾದ್: ರಾಜಕೀಯ ನಿವೃತ್ತಿ ಬಳಿಕ ಬಿಜೆಪಿಯ ಚಾಣಕ್ಷ್ಯ ಏನು ಮಾಡಲಿದ್ದಾರೆ? ಸಹಕಾರ ಸಚಿವಾಲಯ ಏರ್ಪಡಿಸಿದ್ದ ಕಾರ್ಯಕ್ರಮವೊಂದರಲ್ಲಿ ಅವರು ನಿವೃತ್ತಿಯ ಪ್ಲ್ಯಾನ್ ರಿವೀಲ್ ಮಾಡಿದ್ದಾರೆ.

ಗುಜರಾತ್, ಮಧ್ಯಪ್ರದೇಶ, ರಾಜಸ್ಥಾನ ಮತ್ತು ಇತರ ರಾಜ್ಯಗಳ ಸಹಕಾರಿ ಕಾರ್ಮಿಕ ಮಹಿಳೆಯರೊಂದಿಗಿನ ಸಂವಾದ ಕಾರ್ಯಕ್ರಮದಲ್ಲಿ ಭಾಗಿಯಾದ ಅವರು ತಮ್ಮ ನಿವೃತ್ತಿ ಬಳಿಕದ ಜೀವನದ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ.

ರಾಜಕೀಯ ಜೀವನದಿಂದ ನಿವೃತ್ತಿಯಾದ ಬಳಿಕ ನನ್ನ ಉಳಿದ ಜೀವನವನ್ನು ವೇದಗಳು, ಉಪನಿಷತ್ತುಗಳು ಮತ್ತು ನೈಸರ್ಗಿಕ ಕೃಷಿಯ ಬಗ್ಗೆ ಅಧ್ಯಯನ ನಡೆಸಲು ಮೀಸಲಿಡಬೇಕೆಂದು ತೀರ್ಮಾನಿಸಿದ್ದೇನೆ ಎಂದಿದ್ದಾರೆ. ನಿವೃತ್ತ ಜೀವನದಲ್ಲಿ ರಾಜಕೀಯದಿಂದ ದೂರವಿರುವುದಾಗಿ ಹೇಳಿದ್ದಾರೆ.

ಈ ವೇಳೆ ತನಗೆ ಶಾಸ್ತ್ರೀಯ ಸಂಗೀತದ ಬಗ್ಗೆಯೂ ಒಲವಿರುವುದಾಗಿ ಗೃಹಸಚಿವರು ಹೇಳಿಕೊಂಡಿದ್ದಾರೆ. ನಿವೃತ್ತಿಯಾದ ಬಳಿಕ ರಾಜಕೀಯದ ಕಡೆಗೆ ತಿರುಗಿಯೂ ನೋಡಲ್ಲ ಎಂದಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ರಕ್ಷಣಾ ಸಚಿವ ರಾಜನಾಥ್ ಸಿಂಗ್‌ರನ್ನು ಭೇಟಿಯಾದ ಸಿದ್ದರಾಮಯ್ಯ, ಮೈಸೂರು ದಸರಾದ ಬಗ್ಗೆ ಮುಖ್ಯ ಚರ್ಚೆ