Publish Date: Fri, 27 Jun 2025 (15:56 IST)
Updated Date: Fri, 27 Jun 2025 (16:00 IST)
ಅಹಮದಾಬಾದ್: ಇಲ್ಲಿ ನಡೆದ ಜಗನ್ನಾಥ ರಥಯಾತ್ರೆ ವೇಳೆ ಆನೆಯೊಮದು ದಿಕ್ಕಾಪಾಲಾಗಿ ಓಡಿ ಭಯಮೂಡಿಸಿದ ಘಟನೆ ನಡೆಯಿತು.
18 ಆನೆಗಳ ಮೆರವಣಿಗೆಯಲ್ಲಿ ಶುಕ್ರವಾರ ಬೆಳಿಗ್ಗೆ ಖಾಡಿಯಾದ ದೇಸಾಯಿ ನಿ ಪೋಲ್ ಬಳಿ ಗಂಡು ಆನೆಯೊಂದು ನಿಯಂತ್ರಣ ತಪ್ಪಿ ಜನರತ್ತ ಓಡಿದೆ. ಜನರು ಭಯಭೀತರಾಗಿ ಓಡಿದ್ದಾರೆ. ಪರಿಣಾಮ ಇಬ್ಬರು ಭಕ್ತರು ಗಾಯಗೊಂಡಿದ್ದಾರೆ.
ಕಮಲಾ ನೆಹರು ಝೂಲಾಜಿಕಲ್ ಗಾರ್ಡನ್‌ನ ಅಧೀಕ್ಷಕ ಆರ್‌ಕೆ ಸಾಹು ಪ್ರಕಾರ, 18 ಆನೆಗಳ ಪೈಕಿ ಏಕಮಾತ್ರ ಗಂಡಾನೆ ಏಕಾಏಕಿ ಓಡಿಹೋಗಲು ಪ್ರಾರಂಭಿಸಿತು.
ಕಿರಿದಾದ ಬೀದಿಯಾದ್ದರಿಂದ ಜನರು ಭಯಭೀತರಾದರು. ಇದರ ಜೊತೆ ಇನ್ನೆರಡು ಆನೆಗಳು ಸಹ ಓಡಿದವು. ಅವಘಡದಲ್ಲಿ ಇಬ್ಬರು ಗಾಯಗೊಂಡಿದ್ದಾರೆ. ನಂತರ ಮಾವತರು ಆನೆಗಳನ್ನು ನಿಯಂತ್ರಿಸಿದರು. ಆನೆಗಳನ್ನು ಕರೆದೊಯ್ದ ಬಳಿಕ ಮೆರವಣಿಗೆ ಮುಂದುವರಿಯಿತು.
ಗಾಯಗೊಂಡ ಮಹಿಳಾ ಪೊಲೀಸ್ ಸಿಬ್ಬಂದಿಗೆ ಸ್ಥಳದಲ್ಲೇ ಪ್ರಥಮ ಚಿಕಿತ್ಸೆ ನೀಡಲಾಯಿತು.