Publish Date: Fri, 18 Nov 2022 (06:58 IST)
Updated Date: Fri, 18 Nov 2022 (07:00 IST)
ಮುಂಬೈ : ವಿಶ್ವದ 3ನೇ ಶ್ರೀಮಂತ ಉದ್ಯಮಿ ಗೌತಮ್ ಅದಾನಿ ದುಬೈ ಅಥವಾ ನ್ಯೂಯಾರ್ಕ್ನಲ್ಲಿ ಕುಟುಂಬದ ಕಚೇರಿ ತೆರೆಯಲು ಮುಂದಾಗಿದ್ದಾರೆ.
ವಿದೇಶದಲ್ಲಿ ಆದಾನಿ ಕುಟುಂಬದ ವೈಯಕ್ತಿಕ ನಿಧಿಯನ್ನು ಹೂಡಿಕೆ ಮಾಡಲು ಕಚೇರಿ ತೆರೆಯುವ ನಿಟ್ಟಿನಲ್ಲಿ ಮಾತುಕತೆ ನಡೆಯುತ್ತಿದೆ.
ಅದಾನಿ ಕುಟುಂಬ ಈಗ ಸಲಹೆಗಾರರು ಮತ್ತು ತೆರಿಗೆ ತಜ್ಞರ ಜೊತೆ ಮಾತುಕತೆ ನಡೆಸುತ್ತಿದೆ. ಇವರು ನೀಡುವ ಸಲಹೆ ಆಧಾರದ ಮೇಲೆ ಅಂತಿಮವಾಗಿ ಕಚೇರಿ ಸ್ಥಳ ನಿರ್ಧಾರವಾಗಲಿದೆ.
ಉದ್ಯಮಿಯ ಹಿರಿಯ ಸಹೋದರ ವಿನೋದ್ ಅದಾನಿ ದುಬೈನಲ್ಲಿ ನೆಲೆಸಿದ್ದು ಸಿಂಗಾಪುರ ಮತ್ತು ಜಕಾರ್ತಾದಲ್ಲಿ ವ್ಯಾಪಾರ ವ್ಯವಹಾರಗಳನ್ನು ನಿರ್ವಹಿಸುತ್ತಿದ್ದಾರೆ.