Select Your Language

Notifications

webdunia
webdunia
webdunia
webdunia

ದೇಶದ ನಂ.1 ಶ್ರೀಮಂತ ಯಾರು ಗೊತ್ತ?

ದೇಶದ ನಂ.1 ಶ್ರೀಮಂತ  ಯಾರು ಗೊತ್ತ?
ನವದೆಹಲಿ , ಗುರುವಾರ, 18 ಆಗಸ್ಟ್ 2022 (14:45 IST)
ನವದೆಹಲಿ : ದೇಶದ ನಂ.1 ಶ್ರೀಮಂತ ಉದ್ಯಮಿ ಆಗಿರುವ ಅದಾನಿ ಗ್ರೂಪ್ನ ಮುಖ್ಯಸ್ಥ ಗೌತಮ್ ಅದಾನಿ ಅವರಿಗೆ ಕೇಂದ್ರ ಸರ್ಕಾರ `Z’ ಮಾದರಿಯ ವಿಐಪಿ ಭದ್ರತೆ ಒದಗಿಸಿದೆ.

ಸಿಆರ್ಪಿಎಫ್ನ 22 ಕಮಾಂಡೋಗಳು ಅದಾನಿ ಅವರಿಗೆ ಇನ್ನು ಮುಂದೆ ಭದ್ರತೆ ಒದಗಿಸಲಿದ್ದಾರೆ. ಈ ಭದ್ರತಾ ವ್ಯವಸ್ಥೆ ಸಂಪೂರ್ಣವಾಗಿ ಶುಲ್ಕ ಆಧಾರಿತವಾಗಿದ್ದು, ತಿಂಗಳಿಗೆ ಸುಮಾರು 15 ರಿಂದ 20 ಲಕ್ಷ ರೂಪಾಯಿ ವೆಚ್ಚವಾಗಲಿದೆ ಎಂದು ಮೂಲಗಳು ತಿಳಿಸಿವೆ. 

ಅದಾನಿಗೆ ಜೀವ ಬೆದರಿಕೆ ಇದೆ ಎಂಬ ಗುಪ್ತಚರ ಸಂಸ್ಥೆಗಳ ಮಾಹಿತಿ ಆಧರಿಸಿ ಈ ಭದ್ರತೆ ಒದಗಿಸಲಾಗಿದೆ. ಸಿಆರ್ಪಿಎಫ್ ತಂಡ ಈಗಾಗಲೇ ಕೈಗಾರಿಕೋದ್ಯಮಿಯ ಭದ್ರತೆಯನ್ನು ವಹಿಸಿಕೊಂಡಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

 

Share this Story:

Follow Webdunia kannada

ಮುಂದಿನ ಸುದ್ದಿ

ರಷ್ಯಾ ಮಹಿಳೆಯರಿಗೆ ಬಂಪರ್‌ ಆಫರ್‌!