Select Your Language

Notifications

webdunia
webdunia
webdunia
webdunia

ವೈಯಕ್ತಿಕವಾಗಿ ಬಾಡಿಗೆ ನೀಡಿದ್ದರೆ ಜಿಎಸ್‌ಟಿ ಇಲ್ಲ

ವೈಯಕ್ತಿಕವಾಗಿ ಬಾಡಿಗೆ ನೀಡಿದ್ದರೆ ಜಿಎಸ್‌ಟಿ ಇಲ್ಲ
ನವದೆಹಲಿ , ಗುರುವಾರ, 18 ಆಗಸ್ಟ್ 2022 (12:29 IST)
ನವದೆಹಲಿ : ವಾಸದ ಮನೆಗಳನ್ನು ಖಾಸಗಿಗಳಿಗೆ ವೈಯಕ್ತಿಕ ಬಳಕೆಗಾಗಿ ಬಾಡಿಗೆಗೆ ನೀಡಿದ್ದರೆ ಅದಕ್ಕೆ ಜಿಎಸ್ಟಿ ಅನ್ವಯಸುವುದಿಲ್ಲ.

ಬದಲಿಗೆ ವಾಣಿಜ್ಯ ಉದ್ದೇಶಕ್ಕೆ ನೀಡಿದ್ದರೆ ಮಾತ್ರ ಜಿಎಸ್ಟಿ ಅನ್ವಯವಾಗುತ್ತದೆ ಎಂದು ಕೇಂದ್ರ ಸರ್ಕಾರ ಸ್ಪಷ್ಟನೆ ನೀಡಿದೆ.

ಇತ್ತೀಚೆಗೆ ಜುಲೈ 18ರಂದು ಜಾರಿಗೆ ಬಂದ ಜಿಎಸ್ಟಿ ಹೊಸ ನಿಯಮಗಳ ಅನ್ವಯ ಜಿಎಸ್ಟಿ ಅಡಿಯಲ್ಲಿ ನೋಂದಾಯಿಸಲ್ಪಟ್ಟ ಬಾಡಿಗೆದಾರರು ವಸುನೆಯ ಮಾಲಿಕರಿಗೆ ಪಾವತಿಸುವ ಹಣಕ್ಕೆ ಶೇ.18ರಷ್ಟು ಜಿಎಸ್ಟಿ ಪಾವತಿಸಬೇಕು ಎಂದು ವರದಿಯಾಗಿತ್ತು.

ಇದರಿಂದಾಗಿ ಸಾಕಷ್ಟು ಗೊಂದಲ ಉಂಟಾಗಿತ್ತು. ಈ ಹಿನ್ನೆಲೆಯಯಲ್ಲಿ ಕೇಂದ್ರ ಸರ್ಕಾರ ಸ್ಪಷ್ಟನೆ ನೀಡಿದ್ದು, ಮನೆ ಬಾಡಿಗೆಗೆ ಜಿಎಸ್ಟಿ ಇಲ್ಲ ಎಂದು ಸರ್ಕಾರ ಖಚಿತ ಪಡಿಸಿದೆ. ಇದರಿಂದಾಗಿ ಬಾಡಿಗೆದಾರರು ನಿಟ್ಟುಸಿರು ಬಿಡುವಂತಾಗಿದೆ.

ವೈಯಕ್ತಿಕ ಬಳಕೆಗಾಗಿ ಖಾಸಗಿ ವ್ಯಕ್ತಿಗಳಿಗೆ ಮನೆಯನ್ನು ಬಾಡಿಗೆಗೆ ನೀಡಿದ್ದರೆ ಅದಕ್ಕೆ ಜಿಎಸ್ಟಿ ದರ ಅನ್ವಯಿಸುವುದಿಲ್ಲ. ಮನೆಯನ್ನು ವಾಣಿಜ್ಯ ಉದ್ದೇಶಕ್ಕಾಗಿ ಯಾವುದಾದರೂ ಸಂಸ್ಥೆಗೆ ಬಾಡಿಗೆಗೆ ನೀಡಿದ್ದರೇ ಮಾತ್ರ ಅದಕ್ಕೆ ಜಿಎಸ್ಟಿ ಅನ್ವಯಿಸುತ್ತದೆ ಎಂದು ಮಾಹಿತಿ ನೀಡಿದೆ.


Share this Story:

Follow Webdunia kannada

ಮುಂದಿನ ಸುದ್ದಿ

ಭಾರತದ ಅಭಿವೃದ್ಧಿಗೆ ಶ್ರಮಿಸೋಣ : ಗೆಹ್ಲೋಟ್