ನವದೆಹಲಿ : ನ್ಯಾಯಮೂರ್ತಿ ಯು.ಯು.ಲಲಿತ್ (ಉದಯ್ ಉಮೇಶ್ ಲಲಿತ್) ಅವರನ್ನ 49ನೇ ಮುಖ್ಯ ನ್ಯಾಯಮೂರ್ತಿಯಾಗಿ ನೇಮಕ ಮಾಡುವಂತೆ ಕೇಂದ್ರ ಸರ್ಕಾರ ಅಧಿಸೂಚನೆ ಹೊರಡಿಸಿದೆ.
ಪ್ರಸ್ತುತ ಸುಪ್ರೀಂ ಕೋರ್ಟ್ ಮುಖ್ಯನ್ಯಾಯಮೂರ್ತಿಯಾಗಿರುವ ಎನ್.ವಿ.ರಮಣ ಇದೇ ತಿಂಗಳ ಆಗಸ್ಟ್ 26ರಂದು ನಿವೃತ್ತಿ ಹೊಂದಲಿದ್ದು, ನಂತರ ಆಗಸ್ಟ್ 27ರಿಂದ ಲಲಿತ್ ಅಧಿಕಾರದ ಚುಕ್ಕಾಣಿ ಹಿಡಿಯಲಿದ್ದಾರೆ. ಅಲ್ಲದೇ ಲಲಿತ್ ಈ ವರ್ಷದ ನವಂಬರ್ 8 ವರೆಗೆ ಮಾತ್ರವೇ ಮುಖ್ಯನ್ಯಾಯಮೂರ್ತಿಯಾಗಿ ಇರಲಿದ್ದಾರೆ.
ಪ್ರಸ್ತುತ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಯಾಗಿರುವ ಲಲಿತ್ 1957 ನವಂಬರ್ 9 ರಲ್ಲಿ ಜನಿಸಿದರು. 1983ರಲ್ಲಿ ವಕೀಲರಾಗಿ ನೇಮಕವಾದರು. ನಂತರ 1985ರ ವರೆಗೆ ಬಾಂಬೆ ಹೈಕೋರ್ಟ್ನಲ್ಲಿ ಅಭ್ಯಾಸ ಮಾಡಿದರು.