ತಿರುವನಂತಪುರಂ: ಬಸ್‌ನಲ್ಲಿ ಸಹಪ್ರಯಾಣಿಕನೊಬ್ಬ ಪಕ್ಕದಲ್ಲಿ ಕುಳಿತಿದ್ದ ಬಾಲಕಿಯೊಬ್ಬಳಿಗೆ ಲೈಂಗಿಕ ದೌರ್ಜನ್ಯ ಎಸಗಿದ ಘಟನೆಯ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ವೆಲ್ಲರದ ಡಿಪೋದ ಬಸ್‌ನಲ್ಲಿ ಈ ಘಟನೆ ನಡೆದಿದೆ. ಬಸ್ ಕಟ್ಟಕಡ ತಲುಪಿದಾಗ ಪ್ರಯಾಣಿಕ ಈ ರೀತಿ ನಡೆದುಕೊಂಡಿದ್ದಾನೆ. ಕಾಮುಕ ತನ್ನ ತೊಡೆ ಮೇಲೆ ಬ್ಯಾಗನ್ನಿಟ್ಟು, ಪಕ್ಕದಲ್ಲಿದ್ದ ಬಾಲಕಿಯ ತೊಡೆ ಹಾಗೂ ಟೀ ಶರ್ಟ್ ಒಳಗಡೆ ಕೈ ಹಾಕಿದ್ದಾನೆ.
ಇದನ್ನು ಬಾಲಕಿ ಮೊಬೈಲ್‌ನಲ್ಲಿ ರೆಕಾರ್ಡ್ ಮಾಡಿದ್ದಾಳೆ. ಬಸ್ಸಿನಲ್ಲಿ ಹೀಗೆನಾ ವರ್ತಿಸುವುದು ಎಂದು ಹುಡುಗಿ ಕೇಳಿದಳು. ಆತನನ್ನು ಬಸ್‌ನಿಂದ ಕೆಳಗಿಳಿಸುವಂತೆ ಅಥವಾ ಪೊಲೀಸ್ ಠಾಣೆಗೆ ಬಸ್ ತೆಗೆದುಕೊಂಡು ಹೋಗುವಂತೆ ಬಾಲಕಿ ಒತ್ತಾಯಿಸಿದ್ದಾಳೆ. ಆದರೆ, ಬಸ್‌ನಲ್ಲಿದ್ದ ಇತರ ಪ್ರಯಾಣಿಕರು ಪ್ರತಿಕ್ರಿಯಿಸಲು ವಿಫಲರಾದರು. ನಂತರ ಕಂಡಕ್ಟರ್ ಬಸ್ ನಿಲ್ಲಿಸಿ ಆಕೆಯೊಂದಿಗೆ ಅನುಚಿತವಾಗಿ ವರ್ತಿಸಿದ ವ್ಯಕ್ತಿಯನ್ನು ಕೆಳಗೆ ಇಳಿಸಿದ್ದಾರೆ.
ಬಾಲಕಿ ಯಾವುದೇ ದೂರು ನೀಡದ ಕಾರಣ ಘಟನೆ ಕುರಿತು ಪೊಲೀಸರಿಗೆ ದೂರು ನೀಡಿಲ್ಲ ಎಂದು ಕೆಎಸ್‌ಆರ್‌ಟಿಸಿ ಅಧಿಕಾರಿಗಳು ತಿಳಿಸಿದ್ದಾರೆ.
ಕಟ್ಟಕಡ ಪೊಲೀಸರಿಗೆ ಇದುವರೆಗೂ ಯಾವುದೇ ದೂರು ಬಂದಿಲ್ಲ. ತಿರುವನಂತಪುರ-ವೆಲ್ಲರಾದ ಮಾರ್ಗದಲ್ಲಿ ಚಲಿಸುತ್ತಿದ್ದ ಬಸ್ಸಿನಲ್ಲಿ ಈ ಘಟನೆ ನಡೆದಿದೆ. ಇಬ್ಬರೂ ಕಟ್ಟಕಡೆಗೆ ಟಿಕೆಟ್ ತೆಗೆದುಕೊಂಡಿದ್ದರು.