ಮೀರತ್: ದೇಶವನ್ನೇ ಬೆಚ್ಚಿಬೀಳಿಸಿದ ಪತ್ನಿಯಿಂದಲೇ ಹತ್ಯೆಗೀಡಾದ ಸೌರಭ್ ರಜಪೂತ್ ಪ್ರಕರಣ ನಡೆದು 8 ತಿಂಗಳಾದರೂ ದುರ್ಘಟನೆಯ ಪ್ರಭಾವ ಮೀರತ್‌ನ ಇಂದಿರಾನಗರದ ಮೇಲೆ ಇನ್ನೂ ಹಾಗೆಯೇ ಇದೆ. ಆರೋಪಿ, ಪತ್ನಿ ಮುಸ್ಕಾನ್ ರಸ್ತೋಗಿ ಕುಟುಂಬ ಅದೇ ನಗರದಲ್ಲಿ ವಾಸಿಸುತ್ತಿದ್ದು, ಇದೀಗ ಆ ಕುಟುಂಬ ಊರು ಬಿಡಲು ಚಿಂತಿಸಿದೆ.
ಬುಧವಾರ ಅವರ ನಿವಾಸದ ಹೊರಗೆ ಮನೆ ಮಾರಾಟಕ್ಕಿದೆ ಎಂಬ ಫಲಕ ಇದೀಗ ಕುತೂಹಲವನ್ನು ಮೂಡಿದೆ.
ಮುಸ್ಕಾನ್ ಅವರ ತಂದೆ ಪ್ರಮೋದ್ ರಸ್ತೋಗಿ ಗುರುವಾರ ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಕುಟುಂಬವು ಇನ್ನು ಮುಂದೆ ಮೀರತ್‌ನಲ್ಲಿ ವಾಸಿಸಲು ಬಯಸುವುದಿಲ್ಲ.
"ಇಲ್ಲಿ ನೋವಿನ ನೆನಪುಗಳು ಮಾತ್ರ ಉಳಿದಿವೆ. ನಾವು ಹೊರಹೋಗಲು ಮತ್ತು ಹೊಸದಾಗಿ ಪ್ರಾರಂಭಿಸಲು ಬಯಸುತ್ತೇವೆ" ಎಂದು ಅವರು ಹೇಳಿದರು.
ಪ್ರಮೋದ್ ಅವರ ಪತ್ನಿ ಕವಿತಾ ಮತ್ತು ಪುತ್ರ ರಾಹುಲ್ ಕೂಡ ಈ ನಿರ್ಧಾರವನ್ನು ಬೆಂಬಲಿಸಿದ್ದಾರೆ.
ಮಾರ್ಚ್ 3 ರಂದು ತಮ್ಮ ಮಗಳು ಮುಸ್ಕಾನ್ ರಸ್ತೋಗಿ ತನ್ನ ಗೆಳೆಯನ ಜತೆಗೂಡಿ ಪತಿ ಸೌರಭ್‌ನನ್ನು ಭೀಕರವಾಗಿ ಹತ್ಯೆ ಮಾಡಿ, ಡ್ರಮ್ ಒಳಗಡೆ ಇಟ್ಟಿದ್ದಳು. ಈ ಪ್ರಕರಣ ಇಡೀ ದೇಶವನ್ನೇ ಬೆಚ್ಚಿಬೀಳಿಸಿತು.
ಇದೀಗ ಈ ಘಟನೆ ಬಳಿಕ ಮುಸ್ಕಾನ್‌ನ ಕುಟುಂಬ ಸಮಾಜದಲ್ಲಿ ಬದುಕಳು ಕಷ್ಟ ಪಡುತ್ತಿದ್ದಾರೆ ಎಂದಿದ್ದಾರೆ. ನಡೆದ ಘಟನೆಯಿಂದ ಅವರ ಸಾಮಾಜಿಕ ಮತ್ತು ಆರ್ಥಿಕ ಪರಿಸ್ಥಿತಿ ಹದಗೆಟ್ಟಿದೆ ಎಂದು ಕುಟುಂಬ ಹೇಳಿದೆ. ಪ್ರಮೋದ್ ಅವರ ಆಭರಣ ವ್ಯಾಪಾರವು ಮುಚ್ಚುವ ಹಂತದಲ್ಲಿದೆ, ಗ್ರಾಹಕರು ದೂರ ಉಳಿದಿದ್ದಾರೆ ಮತ್ತು ಸಾಲಗಾರರು ವಹಿವಾಟುಗಳನ್ನು ಸ್ಥಗಿತಗೊಳಿಸಿದ್ದಾರೆ ಎಂದು ಅವರು ಹೇಳಿದರು.
ಜನರು ತಮ್ಮ ಮಕ್ಕಳನ್ನು ಕಳುಹಿಸುವುದನ್ನು ನಿಲ್ಲಿಸಿದ ನಂತರ ಮನೆಯಲ್ಲಿ ಟ್ಯೂಷನ್ ಹೇಳುತ್ತಿದ್ದ ಮುಸ್ಕಾನ್ ಅವರ ತಂಗಿಯೂ ತನ್ನ ಆದಾಯವನ್ನು ಕಳೆದುಕೊಂಡರು.
ಪೊಲೀಸ್ ದಾಖಲೆಗಳ ಪ್ರಕಾರ, ಮುಸ್ಕಾನ್ ಮತ್ತು ಆಕೆಯ ಪ್ರೇಮಿ ಸಾಹಿಲ್ ಶುಕ್ಲಾ ಮಾರ್ಚ್ 3 ರಂದು ಆಕೆಯ ಪತಿ ಸೌರಭ್ ರಜಪೂತ್ ನನ್ನು ಕೊಲೆ ಮಾಡಿದ್ದಾರೆ. ಮೃತದೇಹವನ್ನು ನಾಲ್ಕು ತುಂಡುಗಳಾಗಿ ಕತ್ತರಿಸಿ, ಅವುಗಳನ್ನು ಡ್ರಮ್‌ನಲ್ಲಿ ತುಂಬಿಸಿ ಮತ್ತು ಸಿಮೆಂಟ್ ತುಂಬಿಸಿ ಹಿಮಾಚಲ ಪ್ರದೇಶಕ್ಕೆ ಪಲಾಯನ ಮಾಡಿದರು.