Select Your Language

Notifications

webdunia
webdunia
webdunia
webdunia

ಅಪ್ರಾಪ್ತ ಮಗಳ ಮೇಲೆ ಮೂರು ವರ್ಷ ಲೈಂಗಿಕ ದೌರ್ಜನ್ಯ: ಪಾಪಿ ಅಪ್ಪನಿಗೆ ಜೀವಾವಧಿ ಶಿಕ್ಷೆ

ಅಪ್ರಾಪ್ತ ಮಗಳ ಮೇಲೆ ಲೈಂಗಿಕ ದೌರ್ಜನ್ಯ ಪ್ರಕರಣ

Sampriya

ಕೇರಳ , ಗುರುವಾರ, 17 ಜುಲೈ 2025 (20:59 IST)
ಕೇರಳ: ಇಲ್ಲಿನ ಕರಿಮನೂರು ಬಳಿಯ ಬಾಡಿಗೆ ನಿವಾಸದಲ್ಲಿ ತನ್ನ ಅಪ್ರಾಪ್ತ ಮಗಳಿಗೆ ಐದು ವರ್ಷದಿಂದ ಎಂಟು ವರ್ಷ ತುಂಬುವವರೆಗೆ ಮೂರು ವರ್ಷಗಳ ಕಾಲ ಪದೇ ಪದೇ ಲೈಂಗಿಕ ದೌರ್ಜನ್ಯ ಎಸಗಿದ ಪಾಪಿ ತಂದೆಗೆ ಕೇರಳದ ನ್ಯಾಯಾಲಯವು ಗುರುವಾರ ಸಾಯುವವರೆಗೂ ಮೂರು ಜೀವಾವಧಿ ಶಿಕ್ಷೆ ವಿಧಿಸಿದೆ.

2020ರಲ್ಲಿ ಈ ಪ್ರಕರಣ ಬೆಳಕಿಗೆ ಬಂತು. 

ಇಡುಕ್ಕಿ ಫಾಸ್ಟ್ ಟ್ರ್ಯಾಕ್ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಮಂಜು ವಿ ಅವರು ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ
(ಪೋಕ್ಸೊ) ಅಡಿಯಲ್ಲಿ ವಿವಿಧ ಅಪರಾಧಗಳಿಗಾಗಿ ವ್ಯಕ್ತಿಗೆ ಮರಣದ ತನಕ ಜೀವಾವಧಿ ಶಿಕ್ಷೆ ವಿಧಿಸಿದ್ದಾರೆ ಎಂದು ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ (ಎಸ್‌ಪಿಪಿ) ಶಿಜೋಮನ್ ಜೋಸೆಫ್ ಹೇಳಿದರು.

ನ್ಯಾಯಾಲಯವು ತಂದೆಗೆ ₹ 3 ಲಕ್ಷ ದಂಡ ವಿಧಿಸಿ, ಆತನಿಂದ ಹಣವನ್ನು ವಸೂಲಿ ಮಾಡಿದರೆ, ಅದನ್ನು ಅವರ ಮಗಳಿಗೆ ನೀಡುವಂತೆ ಸೂಚಿಸಿತು.

ದಂಡ ಪಾವತಿಸದಿದ್ದರೆ ಹೆಚ್ಚುವರಿ ಆರು ವರ್ಷ ಜೈಲು ಶಿಕ್ಷೆ ಅನುಭವಿಸಬೇಕಾಗುತ್ತದೆ ಎಂದು ನ್ಯಾಯಾಲಯ ಹೇಳಿದೆ.

ಅಲ್ಲದೇ ಮಗುವಿಗೆ ಸೂಕ್ತ ಪರಿಹಾರ ನೀಡುವಂತೆ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರಕ್ಕೆ ಸೂಚಿಸಿದೆ.

ಮಗು ಅನುಭವಿಸಿದ ದೌರ್ಜನ್ಯವು 2020 ರಲ್ಲಿ ಅವಳು ಎಂಟು ವರ್ಷದವಳಿದ್ದಾಗ ಬೆಳಕಿಗೆ ಬಂದಿತು ಎಂದು ಎಸ್‌ಪಿಪಿ ಹೇಳಿದರು.

ನಿತ್ಯ ಹೊಟ್ಟೆನೊವಿನಿಂದ ಮಗಳು ಬಳಲುತ್ತಿದ್ದಾಗ ತಂದೆಯ ಕೃತ್ಯವನ್ನು ತಾಯಿ ಬಳಿ ಬಾಯ್ಬಿಟ್ಟಿದ್ದಾಳೆ. 



Share this Story:

Follow Webdunia kannada

ಮುಂದಿನ ಸುದ್ದಿ

ಯೋಗಿ ಸಿಎಂ ಆದ್ಮೇಲೆ ಯುಪಿಯಲ್ಲಿ 15 ಸಾವಿರ ಎನ್‌ಕೌಂಟರ್‌, 30 ಸಾವಿರ ಕ್ರಿಮಿನಲ್‌ಗಳ ಅರೆಸ್ಟ್‌