ಬೆಂಗಳೂರು: ಭಿಕ್ಷಾಟನೆಯಲ್ಲಿ ತೊಡಗಿರುವ ಮಕ್ಕಳ ಡಿಎನ್ಎ ಪರೀಕ್ಷೆಗೆ ಪಂಜಾಬ್ ಸರ್ಕಾರ ಮುಂದಾಗಿದ್ದು, ಕುಟುಂಬದ ಜತೆ ಹೊಂದಾಣಿಕೆಯಾಗದಿದ್ದಲ್ಲಿ ಅಂತವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಸೂಚಿಸಿದೆ.
ಸಾಮಾಜಿಕ ಭದ್ರತೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಬಲ್ಜಿತ್ ಕೌರ್ ಆದೇಶ ಹೊರಡಿಸಿದ್ದಾರೆ. ಮಗುವು ವಯಸ್ಕರೊಂದಿಗೆ ಭಿಕ್ಷೆ ಬೇಡುತ್ತಿರುವುದು ಕಂಡುಬಂದರೆ, ಅವರ ಕುಟುಂಬ ಸಂಬಂಧಗಳನ್ನು ಪರಿಶೀಲಿಸಲು ಡಿಎನ್ಎ ಪರೀಕ್ಷೆಯನ್ನು ನಡೆಸಲಾಗುತ್ತದೆ. ಫಲಿತಾಂಶಗಳು ಲಭ್ಯವಾಗುವವರೆಗೆ, ಮಗುವು ಮಕ್ಕಳ ಕಲ್ಯಾಣ ಸಮಿತಿಗಳ ಮೇಲ್ವಿಚಾರಣೆಯಲ್ಲಿ ಶಿಶುಪಾಲನಾ ಸಂಸ್ಥೆಯಲ್ಲಿ ಉಳಿಯುತ್ತದೆ.
ಡಿಎನ್‌ಎ ಪರೀಕ್ಷೆಯಲ್ಲಿ ವಯಸ್ಕರಿಗೆ ಅವರು ಜೊತೆಯಲ್ಲಿರುವ ಮಗುವಿಗೆ ಸಂಬಂಧವಿಲ್ಲ ಎಂದು ದೃಢಪಡಿಸಿದರೆ ಕಠಿಣ ಕ್ರಮ ಕೈಗೊಳ್ಳುವುದಾಗಿ ಅಧಿಕಾರಿಗಳು ಭರವಸೆ ನೀಡಿದರು.
ಜೀವನಜ್ಯೋತ್-2 ಯೋಜನೆಯಡಿ ಸಾಮಾಜಿಕ ಭದ್ರತಾ ನಿರ್ದೇಶನಾಲಯ (ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ) ಎಲ್ಲಾ ಡಿಸಿಗಳಿಗೆ ನಿರ್ದೇಶನಗಳನ್ನು ನೀಡಿದೆ.
ವಯಸ್ಕರ ಜತೆಗೆ ಮಗುವನ್ನು ಬಲವಂತವಾಗಿ ಭಿಕ್ಷೆ ಬೇಡುವುದು ಮತ್ತು ಅವರ ಸಂಬಂಧವು ಅನುಮಾನಾಸ್ಪದವಾಗಿ ತೋರುವ ಪ್ರಕರಣಗಳನ್ನು ಜಿಲ್ಲೆಗಳಲ್ಲಿನ ಮಕ್ಕಳ ಕಲ್ಯಾಣ ಸಮಿತಿಗಳು ಗುರುತಿಸುತ್ತವೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.