Select Your Language

Notifications

webdunia
webdunia
webdunia
webdunia

Viral Video, ಪಾಟ್ನಾ: ಹಾಡಹಗಲೇ ಆಸ್ಪತ್ರೆಯೊಳಗೆ ನುಗ್ಗಿ ಕೊಲೆ ಆರೋಪಿಯನ್ನು ಗುಂಡಿಕ್ಕಿ ಕೊಂದ ಐವರ ಗುಂಪು

ಪಾಟ್ನಾ ಆಸ್ಪತ್ರೆ ಫೈರಿಂಗ್ ಕೇಸ್

Sampriya

ನವದೆಹಲಿ , ಗುರುವಾರ, 17 ಜುಲೈ 2025 (17:04 IST)
Photo Credit X
ವೈದ್ಯಕೀಯ ಚಿಕಿತ್ಸೆಗಾಗಿ ಪೆರೋಲ್‌ನಲ್ಲಿ ಹೊರಬಂದ ಖೈದಿಯೊಬ್ಬನನ್ನು ಗುರುವಾರ ಪಾಟ್ನಾದ ಖಾಸಗಿ ಆಸ್ಪತ್ರೆಯೊಳಗೆ ಐವರು ಅಪರಿಚಿತ ದುಷ್ಕರ್ಮಿಗಳು ಅನೇಕ ಬಾರಿ ಗುಂಡು ಹಾರಿಸಿ ಕೊಂದ ಘಟನೆ ಬಿಹಾರದಲ್ಲಿ ವರದಿಯಾಗಿದೆ. ಆಸ್ಪತ್ರೆಯೊಳಗೆ ನುಗ್ಗಿ ಕೊಲ್ಲುವಷ್ಟರ ಮಟ್ಟಿಗೆ ಬಿಹಾರದಲ್ಲಿ ಗೂಂಡಾಗಿರಿ ಬೆಳೆದಿರುವುದು ಸರ್ಕಾರದ ಆಡಳಿತದ ಕಡೆ ಪ್ರಶ್ನೆ ಎದ್ದಿದೆ. 

ಪೊಲೀಸರ ಪ್ರಕಾರ, ನಗರದ ರಾಜಾ ಬಜಾರ್ ಪ್ರದೇಶದ ಪಾರಸ್ ಆಸ್ಪತ್ರೆಯಲ್ಲಿ ಗುಂಡಿನ ದಾಳಿ ನಡೆದಿದೆ. ಬಲಿಪಶುವನ್ನು ಚಂದನ್ ಮಿಶ್ರಾ ಎಂದು ಗುರುತಿಸಲಾಗಿದೆ. ಬಕ್ಸರ್ ಜಿಲ್ಲೆಯಲ್ಲಿ ನಡೆದ ಕೊಲೆ ಪ್ರಕರಣದ ಆರೋಪಿ ಚಂದನ್ ಮಿಶ್ರಾ ವೈದ್ಯಕೀಯ ಪೆರೋಲ್‌ನಲ್ಲಿ ಬ್ಯೂರ್ ಜೈಲಿನಿಂದ ಬಿಡುಗಡೆಯಾಗಿ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಾಗಿದ್ದ.

ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ವಿಡಿಯೋದಲ್ಲಿ, ಆಸ್ಪತ್ರೆಯ ಕಾರಿಡಾರ್‌ನಲ್ಲಿ ಐವರು ಬಂದೂಕು ಹಿಡಿದುಕೊಂಡಿದ್ದ ಗೂಂಡಾಗಳು ಚಂದನ್ ಮಿಶ್ರಾ ಇದ್ದ ಕೋಣೆಗೆ ನುಗ್ಗಿದ್ದಾರೆ.  

ಅಲ್ಲಿ ಆತನ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ. ದಾಳಿಯ ನಂತರ ಐವರು ದಾಳಿಕೋರರು ಆಸ್ಪತ್ರೆ ಆವರಣದಿಂದ ಪರಾರಿಯಾಗಿದ್ದಾರೆ. 

ಪೊಲೀಸ್ ತಂಡಗಳು ಸ್ಥಳಕ್ಕೆ ಧಾವಿಸಿದ್ದು, ಬಕ್ಸರ್ ಪೊಲೀಸರ ನೆರವಿನೊಂದಿಗೆ ಶೂಟರ್‌ಗಳನ್ನು ಗುರುತಿಸಲು ಹುಡುಕಾಟ ಆರಂಭಿಸಿದ್ದಾರೆ.

ಆಸ್ಪತ್ರೆಯ ಭದ್ರತೆಯಲ್ಲಿ ಸಂಭವನೀಯ ಲೋಪದೋಷಗಳು ಮತ್ತು ಆಸ್ಪತ್ರೆಯ ಸಿಬ್ಬಂದಿಯ ಕಡೆಯಿಂದ ಏನಾದರೂ ತೊಡಕು ಇದೆಯೇ ಎಂಬ ಬಗ್ಗೆಯೂ ತನಿಖೆ ನಡೆಸುತ್ತಿದ್ದೇವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Patna hospital Firing Case, Patna's Paras Hospital Firing Case, Chandan Mishra Case

Share this Story:

Follow Webdunia kannada

ಮುಂದಿನ ಸುದ್ದಿ

ಬಿಜೆಪಿ ಶಾಸಕರನ್ನು ಕಾಂಗ್ರೆಸ್ ಟಾರ್ಗೆಟ್ ಮಾಡ್ತಿದೆ: ಛಲವಾದಿ ನಾರಾಯಣಸ್ವಾಮಿ