ಪಿಕ್ ನಿಕ್ ಗೆಂದು ಕರೆದು ಇಬ್ಬರು ಅಪ್ರಾಪ್ತ ಬಾಲಕಿಯರ ಮೇಲೆ 7 ದಿನಗಳ ಕಾಲ ನಿರಂತರ ಅತ್ಯಾಚಾರ ಎಸಗಿದ ಸ್ನೇಹಿತ

ಭಾನುವಾರ, 13 ಜನವರಿ 2019 (07:21 IST)
ರಾಂಚಿ : ಯುವಕನೊಬ್ಬ 13 ಮತ್ತು 16 ವಯಸ್ಸಿನ ಇಬ್ಬರು ಅಪ್ರಾಪ್ತ ಬಾಲಕಿಯರನ್ನು ಪಿಕ್ ನಿಕ್ ಗೆ ಕರೆದು ತನ್ನ ಗೆಳೆಯನ ಜೊತೆ ಸೇರಿ ಕೂಡಿ ಹಾಕಿ 7 ದಿನಗಳ ಕಾಲ ನಿರಂತರ ಅತ್ಯಾಚಾರ ಎಸಗಿದ ಘಟನೆ  ಜಾರ್ಖಂಡ್‍ನ ಟಾಟಿಸಿಲ್ವಾಯಿನಲ್ಲಿ ನಡೆದಿದೆ.


ಆರೋಪಿಗಳಲ್ಲಿ ಓರ್ವನನ್ನು ಟಾಟಿಸಿಲ್ವಾಯಿ ನಿವಾಸಿ ಮನೀಶ್ ಕುಮಾರ್ ಎಂದು ಗುರುತಿಸಲಾಗಿದ್ದು,  ಈತ ಸಂತ್ರಸ್ತೆಯರ ಸ್ನೇಹಿತ  ಎಂಬುದಾಗಿ ತಿಳಿದುಬಂದಿದೆ. ಈತ ಜನವರಿ 2ರಂದು ಟಾಟಿಸಿಲ್ವಾಯಿಯಲ್ಲಿ ಪಿಕ್ ನಿಕ್ ಮಾಡುತ್ತಿದ್ದೇವೆ ನೀವು ಬಂದು ಸೇರಿಕೊಳ್ಳಿ ಎಂದು  ಬಾಲಕಿಯರನ್ನು ಕರೆದಿದ್ದನು. ನಂತರ ಅಲ್ಲಿಗೆ ಬಂದ ಬಾಲಕಿಯರಿಬ್ಬರನ್ನು ತನ್ನ ಗೆಳೆಯನೊಬ್ಬನ ಜೊತೆ ಸೇರಿ ಕೂಡಿಹಾಕಿ ಏಳು ದಿನಗಳ ಕಾಲ ಅತ್ಯಾಚಾರ ಎಸಗಿದ್ದಾನೆ.


ಇತ್ತ ಬಾಲಕಿಯರು ಕಾಣದ ಹಿನ್ನಲೆಯಲ್ಲಿ ತಾಯಿ ಜಗನ್ನಾಥಪುರ ಪೊಲೀಸ್ ಠಾಣೆಯಲ್ಲಿ ನಾಪತ್ತೆ ದೂರು ದಾಖಲಿಸಿದ್ದರು. ನಂತರ ಕಾಣೆಯಾದ ಬಾಲಕಿಯರ ಬಗ್ಗೆ ಖಚಿತ ಮಾಹಿತಿ ಪಡೆದುಕೊಂಡ ಪೊಲೀಸರು ಬಾಲಕಿಯರನ್ನು ರಕ್ಷಣೆ ಮಾಡಿ ವೈದ್ಯಕೀಯ ಪರೀಕ್ಷೆಗಾಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಈ ಘಟನೆಗೆ ಸಂಬಂಧಿಸಿದಂತೆ ಪೋಕ್ಸೋ ಕಾಯ್ಡೆಯಡಿ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ಉರ್ದು ನಾಮಫಲಕಕ್ಕೆ ವಿರೋಧ: ಹೋರಾಟಗಾರರ ಬಂಧನ