Publish Date: Wed, 09 Jan 2019 (10:07 IST)
Updated Date: Wed, 09 Jan 2019 (10:22 IST)
ಬಳ್ಳಾರಿ : ರಕ್ಷಕನಾಗಬೇಕಾದ ತಂದೆಯೇ ಭಕ್ಷಕನಂತೆ ಸ್ವಂತ ಮಗಳ ಮೇಲೆಯೇ ಅತ್ಯಾಚಾರ ಎಸಗಿದ ಅಮಾನವೀಯ ಘಟನೆ ಜಿಲ್ಲೆಯ ಹರಪನಹಳ್ಳಿ ತಾಲೂಕಿನ ಚಿಗಟೇರಿಯಲ್ಲಿ ನಡೆದಿದೆ.
ಕರಿಬಸಪ್ಪ ಅತ್ಯಾಚಾರ ಎಸಗಿದ ಪಾಪಿ ತಂದೆ. ಈತ ತನ್ನ 15 ವರ್ಷದ ಮಗಳನ್ನು ಆರು ತಿಂಗಳ ಹಿಂದೆಯೇ ಅತ್ಯಾಚಾರ ಮಾಡಿದ್ದ. ಆದರೆ ಇದೀಗ ಡಿಸೆಂಬರ್ 26ರಂದು ಮತ್ತೆ ಮಗಳನ್ನು ತೋಟದ ಮನೆಗೆ ಕರೆದೊಯ್ದು ಅತ್ಯಾಚಾರ ಮಾಡಿದ್ದಾನೆ. ಆ ವೇಳೆ ಆತ ತನ್ನ ಪತ್ನಿಯ ಕೈಗೆ ಸಿಕ್ಕಿ ಬಿದ್ದಿದ್ದಾನೆ.
ಗಂಡನ ಈ ನೀಚ ಕೃತ್ಯ ಕಣ್ಣಾರೆ ಕಂಡ ಪತ್ನಿ ಚಿಗಟೇರಿ ಠಾಣೆಯಲ್ಲಿ ಪತಿಯ ವಿರುದ್ಧ ಮಂಗಳವಾರ ದೂರು ದಾಖಲಿಸಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸುತ್ತಿದ್ದಂತೆ ಕರಿಬಸಪ್ಪ ತಲೆಮರೆಸಿಕೊಂಡಿದ್ದು, ಆತನ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ.