Select Your Language

Notifications

webdunia
webdunia
webdunia
webdunia

ಪ್ರಿಯಕರನ ಜೊತೆಯಿರಲು ಮಗಳು ಅಡ್ಡಿಯಾಗುತ್ತಿದ್ದಾಳೆಂದು ತಾಯಿ ಮಾಡಿದ್ದೇನು ಗೊತ್ತಾ?

ಪ್ರಿಯಕರನ ಜೊತೆಯಿರಲು ಮಗಳು ಅಡ್ಡಿಯಾಗುತ್ತಿದ್ದಾಳೆಂದು ತಾಯಿ ಮಾಡಿದ್ದೇನು ಗೊತ್ತಾ?
ವಿಶಾಖಪಟ್ಟಣ , ಬುಧವಾರ, 9 ಜನವರಿ 2019 (08:04 IST)
ವಿಶಾಖಪಟ್ಟಣ : ಪ್ರಿಯಕರನೊಂದಿಗೆ ಏಕಾಂತವಾಗಿರಲು ಅಡ್ಡಿಯಾಗುತ್ತಿದ್ದ ಮಗಳನ್ನು ಹೆತ್ತ ತಾಯಿಯೇ ಪ್ರಿಯಕರನ ಜೊತೆ ಸೇರಿ ನಗ್ನಗೊಳಿಸಿ ಚಿತ್ರಹಿಂಸೆ ನೀಡಿರುವ ಘಟನೆ ಆಂಧ್ರಪ್ರದೇಶದ ವಿಶಾಖಪಟ್ಟಣಂನಲ್ಲಿ ನಡೆದಿದೆ.


ಬಾಲಕಿಯ ತಂದೆ ಮೃತಪಟ್ಟ ಕಾರಣ ತಾಯಿಯ ಜೊತೆ ವಾಸವಾಗಿದ್ದಳು. ಆದರೆ ತಾಯಿ ಮತ್ತೊಬ್ಬನನ್ನು ಪ್ರೀತಿಸುತ್ತಿದ್ದಳು. ಇವರಿಬ್ಬರ ಏಕಾಂತಕ್ಕೆ ಮಗಳು ಅಡ್ಡಿಯಾಗುತ್ತಿದ್ದಾಳೆಂದು ತಾಯಿ ಮತ್ತು ಆಕೆಯ ಪ್ರಿಯತಮ ಸೇರಿ ಬಾಲಕಿಯನ್ನು ನಗ್ನಗೊಳಿಸಿ ಕಟ್ಟಿಗೆಯಿಂದ ಥಳಿಸಿ ಬಾತ್​ರೂಂನಲ್ಲಿ ಕೂಡಿಹಾಕಿದ್ದಾರೆ.


ಬಾಲಕಿ ಅಳುತ್ತಿರುವುದನ್ನು ಗಮನಿಸಿದ ಸ್ಥಳೀಯರು ಚೈಲ್ಡ್​ ಹೆಲ್ಪ್​ ಲೈನ್​ ಅಧಿಕಾರಿಗೆ ಕರೆಮಾಡಿ ಮಾಹಿತಿ ನೀಡಿದ್ದು, ಕೂಡಲೇ ಸ್ಥಳಕ್ಕೆ ಆಗಮಿಸಿದ ಅಧಿಕಾರಿಗಳು ಆಕೆಯನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಈ ಘಟನೆ ಕುರಿತು ಸಹಾಯವಾಣಿ ​ಅಧಿಕಾರಿಗಳು ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಸಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಪ್ರಿಯಕರ ಮತ್ತು ಸ್ನೇಹಿತರಿಂದ ಯುವತಿಯ ಮೇಲೆ 10 ತಿಂಗಳುಗಳ ಕಾಲ ಅತ್ಯಾಚಾರ