Publish Date: Mon, 07 Jan 2019 (07:54 IST)
Updated Date: Mon, 07 Jan 2019 (07:57 IST)
ರಾಯ್ ಪುರ : ಮಗನೊಬ್ಬ ತನ್ನ ಹೆತ್ತ ತಾಯಿಯನ್ನು ಕೊಂದು ಆಕೆಯ ದೇಹವನ್ನು ಕತ್ತರಿಸಿ ರಕ್ತವನ್ನು ಕುಡಿದ ಭಯಾನಕ ಘಟನೆ ಛತ್ತಿಸ್ ಗಢದ ಕೋರ್ಬಾ ಜಿಲ್ಲೆಯಲ್ಲಿ ತಡವಾಗಿ ಬೆಳಕಿಗೆ ಬಂದಿದೆ.
ದಿಲೀಪ್ ಯಾದವ್(27) ತಾಯಿಯನ್ನು ಕೊಂದು ತಿಂದ ಪಾಪಿ, ಸುಮಾರಿಯಾ(50) ಮೃತ ದುರ್ದೈವಿ. ಡಿಸೆಂಬರ್ 31ರಂದು ದಿಲೀಪ್ ತನ್ನ ತಾಯಿಯನ್ನೇ ತುಂಡು ತುಂಡಾಗಿ ಕತ್ತರಿಸಿ ಆಕೆಯ ರಕ್ತ ಕುಡಿದು, ನಂತರ ಮನೆಯೊಳಗೆ ಮೃತದೇಹದ ತುಂಡುಗಳನ್ನು ತೆಗೆದುಕೊಂಡು ಹೋಗಿ ಬೆಂಕಿ ಹಚ್ಚಿ ಸುಟ್ಟಿದ್ದಾನೆ. ಈ ದೃಶ್ಯವನ್ನು ಕಣ್ಣಾರೆ ಕಂಡ ಪಕ್ಕದ ಮನೆಯ ಮಹಿಳೆ ಭಯದಿಂದ ಯಾರಿಗೂ ಹೇಳಿರಲಿಲ್ಲ.
ಆದರೆ ಇದೀಗ ಮಹಿಳೆ ಈ ಘಟನೆಯ ಬಗ್ಗೆ ಪೊಲೀಸರಿಗೆ ತಿಳಿಸಿ ದೂರು ನೀಡಿದ್ದಾಳೆ. ಆಕೆಯ ದೂರಿನ ಆಧಾರದ ಮೇರೆಗೆ ಪೊಲೀಸರು ದಿಲೀಪ್ ನನ್ನು ಬಂಧಿಸಲು ಹೋದಾಗ ಆತ ತಪ್ಪಿಸಿಕೊಂಡು ಪರಾರಿಯಾಗಿದ್ದಾನೆ. ಆತನ ಬಗ್ಗೆ ಗ್ರಾಮಸ್ಥರಲ್ಲಿ ವಿಚಾರಿಸಿದಾಗ ಆತ ತಾಂತ್ರಿಕ ವಿದ್ಯೆಯನ್ನು ತಿಳಿದಿದ್ದನು. ಅಲ್ಲದೆ ಯಾವಾಗಲು ತನ್ನ ತಂದೆ ಹಾಗೂ ಸಹೋದರನ ಸಾವಿಗೆ ನೀನೆ ಕಾರಣ ಎಂದು ತಾಯಿಯ ಬಳಿ ಜಗಳವಾಡುತ್ತಿದ್ದನು ಎಂದು ತಿಳಿಸಿದ್ದಾರೆ. ಈ ಮಾಹಿತಿಯ ಪ್ರಕಾರ ಆತ ನರಬಲಿ ಎಂದು ಹೆತ್ತವಳನ್ನು ಬಲಿ ಪಡೆದಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ.