Publish Date: Sun, 06 Jan 2019 (07:40 IST)
Updated Date: Sun, 06 Jan 2019 (07:42 IST)
ಚಂಡೀಗಢ : ಕೆಲಸ ಕಲಿಯಲು ಬಂದ ಅಪ್ತಾಪ್ತ ಬಾಲಕಿಯನ್ನು ಆಕೆಯ ಚಿಕ್ಕಮ್ಮ ವೇಶ್ಯಾವಾಟಿಕೆಗೆ ತಳ್ಳಿದ ಘಟನೆ ಚಂಡೀಗಢದಲ್ಲಿ ನಡೆದಿದೆ.
ಅಪ್ರಾಪ್ತೆಯ ತಾಯಿ, ಮಗಳು ಕೆಲಸ ಕಲಿಯಲಿ ಎನ್ನುವ ಕಾರಣಕ್ಕೆ ಆಕೆಯ ಚಿಕ್ಕಮ್ಮನ ಮನೆಗೆ ಕಳುಹಿಸಿದ್ದಾಳೆ. ಆದರೆ ಚಿಕ್ಕಮ್ಮ ಆಕೆಗೆ ಮನೆಗೆಲಸ ಕಲಿಸುವ ಬದಲು ಆಕೆಯನ್ನು ವೇಶ್ಯಾವಾಟಿಕೆಗೆ ತಳ್ಳಿ ದಿನಕ್ಕೊಂದು ಪುರುಷರನ್ನು ಮನೆಗೆ ಕರೆತಂದು ಕೋಣೆಯಲ್ಲಿ ಆಕೆಯನ್ನು ಆತನ ಜೊತೆ ಕೂಡಿ ಹಾಕ್ತಿದ್ದಳಂತೆ.
ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದಕ್ಕೆ ಆಕೆಯ ಮೇಲೆ ಹಲ್ಲೆ ಮಾಡಿ ಹತ್ಯೆ ಮಾಡುವುದಾಗಿ ಹೆದರಿಸುತ್ತಿದ್ದಳಂತೆ. ಇದರಿಂದ ಬೇಸತ್ತ ಬಾಲಕಿ ಅಲ್ಲಿಂದ ಹೇಗೋ ತಪ್ಪಿಸಿಕೊಂಡು ಪೊಲೀಸ್ ಠಾಣೆಗೆ ಬಂದು ದೂರು ನೀಡಿದ್ದಾಳೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಮಹಿಳೆ ಸೇರಿ ಮೂವರನ್ನು ಬಂಧಿಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ.