Select Your Language

Notifications

webdunia
webdunia
webdunia
webdunia

42 ವರ್ಷದ ಮಹಿಳೆಯೊಬ್ಬಳ ಮೇಲೆ ಐವರು ಕಾಮುಕರಿಂದ ಸಾಮೂಹಿಕ ಅತ್ಯಾಚಾರ

42 ವರ್ಷದ ಮಹಿಳೆಯೊಬ್ಬಳ ಮೇಲೆ ಐವರು ಕಾಮುಕರಿಂದ ಸಾಮೂಹಿಕ ಅತ್ಯಾಚಾರ
ಚಂಡೀಘಡ , ಗುರುವಾರ, 3 ಜನವರಿ 2019 (06:51 IST)
ಚಂಡೀಗಢ : 42 ವರ್ಷದ ಮಹಿಳೆಯೊಬ್ಬಳ ಮೇಲೆ ಐವರು ಕಾಮುಕರು ಅತ್ಯಾಚಾರ ಎಸಗಿದ ಘಟನೆ ಹರಿಯಾಣದಲ್ಲಿ ನಡೆದಿದೆ.


ಪತಿಯನ್ನು ಕಳೆದುಕೊಂಡ ಸಂತ್ರಸ್ತೆ ದೆಹಲಿಯಲ್ಲಿ ವಾಸವಾಗಿದ್ದು, ಪತಿ ಕೆಲಸ ಮಾಡುತ್ತಿದ್ದ ಸಂಸ್ಥೆಯಲ್ಲಿ ಆರ್ಥಿಕ ವಿವಾದವೊಂದನ್ನು ಪರಿಹರಿಸಲು ಗುರುಗ್ರಾಮಕ್ಕೆ ಹೋಗಿದ್ದಳು.  ಅಲ್ಲಿ ಮಧ್ಯಾಹ್ನ ಸುಮಾರು 2.30 ಗಂಟೆಗೆ ಅಂಕಿತ್ ಎಂಬಾತನ ಆಟೋ-ರಿಕ್ಷಾ ಹತ್ತಿದ್ದಾಳೆ.  ಆಗ ಆತ ಆಕೆಯನ್ನು ನಿರ್ಜನ ಪ್ರದೇಶದ ಮನೆಯೊಂದಕ್ಕೆ ಕರೆದುಕೊಂಡು ಹೋಗಿ ತನ್ನ ಇಬ್ಬರು ಸ್ನೇಹಿತರ ಜೊತೆ ಸೇರಿ ಅತ್ಯಾಚಾರ ಎಸಗಿದ್ದಾನೆ.


ಅಷ್ಟೇ ಅಲ್ಲದೇ ನಂತರ ಮೂವರು ಸೇರಿ ಮತ್ತಿಬ್ಬರು ಆಟೋ ಚಾಲಕರಿಗೆ ಆಕೆಯನ್ನು ಒಪ್ಪಿಸಿದ್ದಾರೆ. ಆಗ ಅವರಿಬ್ಬರು ಸೇರಿ ಮತ್ತೆ ಆಕೆಯ ಮೇಲೆ ಚಲಿಸುತ್ತಿದ್ದ ಆಟೋದಲ್ಲಿ ಅತ್ಯಾಚಾರ ಎಸಗಿ ಮಧ್ಯರಾತ್ರಿ ರಾಂಪುರಾ ಫ್ಲೈಓವರ್ ಸಮೀಪದ ಫುಡ್ ಸ್ಟಾಲ್ ಬಳಿ ಸಂತ್ರಸ್ತೆಯನ್ನು ಎಸೆದು ಪರಾರಿಯಾಗಿದ್ದಾರೆ.


ನಂತರ ದಾರಿಹೋಕರು ಮಹಿಳೆಯನ್ನು ನೋಡಿ ಸಮೀಪದ ಆಸ್ಪತ್ರೆಗೆ ದಾಖಲಿಸಿದ್ದಾರೆ. ನಂತರ ಮಹಿಳೆ ಗುರುಗ್ರಾಮ ಪೊಲೀಸ್ ಠಾಣೆಗೆ ಹೋಗಿ ದೂರು ದಾಖಲಿಸಿದ್ದಾರೆ. ಸಂತ್ರಸ್ತೆಯ ದೂರಿನ ಆಧಾರದ ಮೇಲೆ ಪೊಲೀಸರು ಅಂಕಿತ್ ಮತ್ತು ಆತನ ಸಹಚರರನ್ನು ಬಂಧಿಸಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಪತ್ನಿ, ಪ್ರಿಯಕರನ ಜೊತೆ ರೂಮಿನಲ್ಲಿರುವುದನ್ನು ಕಂಡು ಪತಿ ಮಾಡಿದ್ದೇನು ಗೊತ್ತಾ?