Select Your Language

Notifications

webdunia
webdunia
webdunia
webdunia

ಪೊಲೀಸ್ ಇನ್ಸ್ ಪೆಕ್ಟರ್ ಮಗಳ ಮೇಲೆ ನಡೆಯಿತು ಸಾಮೂಹಿಕ ಅತ್ಯಾಚಾರ

ಪೊಲೀಸ್ ಇನ್ಸ್ ಪೆಕ್ಟರ್ ಮಗಳ ಮೇಲೆ ನಡೆಯಿತು ಸಾಮೂಹಿಕ ಅತ್ಯಾಚಾರ
ಲಕ್ನೋ , ಶನಿವಾರ, 29 ಡಿಸೆಂಬರ್ 2018 (08:14 IST)
ಲಕ್ನೋ: ನಾಲ್ವರು ಎಂಜಿನಿಯರಿಂಗ್ ವಿದ್ಯಾರ್ಥಿಗಳು ಪೊಲೀಸ್ ಇನ್ಸ್ ಪೆಕ್ಟರ್ ಮಗಳ ಮೇಲೆ ಅತ್ಯಾಚಾರ ಎಸಗಿ ಠಾಣೆಯ ಮುಂದೆ ಎಸದು ಹೋದ ಘಟನೆ ಉತ್ತರ ಪ್ರದೇಶದ ಕಾನ್ಪುರ್ ನಲ್ಲಿ ನಡೆದಿದೆ


ಸಂತ್ರಸ್ತೆ 11ನೇ ತರಗತಿಯ ವಿದ್ಯಾರ್ಥಿನಿ. ಆರೋಪಿಗಳನ್ನು ಅನುರಾಗ್ ಯಾದವ್ ಮತ್ತು ಆತನ ಸ್ನೇಹಿತರಾದ ಜಾಕಿ, ಶುಭಮ್ ಮತ್ತು ಅಭಿಷೇಕ್ ಎಂದು ಗುರುತಿಸಿದ್ದು, ಅವರ ವಿರುದ್ಧ ದೂರು ದಾಖಲಾಗಿದೆ.


ಈ ನಾಲ್ವರು ಬೇರೆ ಬೇರೆ ಕಾಲೇಜಿನಲ್ಲಿ ಓದುತ್ತಿದ್ದರು. ಸಂತ್ರಸ್ತೆಗೆ ಪ್ರಜ್ಞೆ ಬಂದಾಗ ನಾಲ್ವರು ಆರೋಪಿಗಳಲ್ಲಿ ಒಬ್ಬನನ್ನು ಗುರುತಿಸಿದ್ದಾಳೆ. ಹಾಗೇ ಘಟನೆಯ ಕುರಿತು ವಿವರಿಸಿದ್ದಾಳೆ. ಆರೋಪಿಯು ಕಕಡಿಯೋ ಪಟ್ಟಣದಲ್ಲಿರುವ ಫ್ಲಾಟ್‍ ಗೆ ಕರೆದುಕೊಂಡು ಹೋಗಿ ಸ್ನೇಹಿತರ ಜೊತೆ ಸೇರಿ ಸಾಮೂಹಿಕ ಅತ್ಯಾಚಾರ ಎಸಗಿದ್ದಾನೆ ಎಂದು ಎಸ್‍ಪಿ ಸಂಜೀವ್ ಹೇಳಿದ್ದಾರೆ.
ಆರೋಪಿಗಳು ವಿಚಾರಣೆ ಸಲುವಾಗಿ ಪೊಲೀಸ್  ಕಸ್ಟಡಿಯಲ್ಲಿದ್ದಾರೆ. ವಿಚಾರಣೆ ಮುಗಿದ ಬಳಿಕ ಅವರನ್ನು ಬಂಧಿಸಲಾಗುತ್ತದೆ ಎಂದು ಪೊಲೀಸ್ ಅಧಿಕಾರಿ ಅನಂತ್ ಡಿಯೋ ಅವರು ತಿಳಿಸಿದ್ದಾರೆ.



Share this Story:

Follow Webdunia kannada

ಮುಂದಿನ ಸುದ್ದಿ

ತುತ್ತು ನೀಡಿದ ತಾಯಿಯ ಕೈಯನ್ನೇ ಕತ್ತರಿಸಿಬಿಟ್ಟ ಮಗ!