Publish Date: Thu, 27 Dec 2018 (18:37 IST)
Updated Date: Thu, 27 Dec 2018 (18:39 IST)
ಶಿವಮೊಗ್ಗ ನಗರದ ಹೊರವಲಯದಲ್ಲಿ ರೌಡಿ ಬಂಕ್ ಬಾಲು ಕೊಲೆ ಘಟನೆ ಭಯಾನಕ ತಿರುವು ಪಡೆದುಕೊಂಡಿದೆ. ಮರ್ಡರ್ ನಲ್ಲಿದ್ದ ಪ್ರಮುಖ ಆರೋಪಿ ಪೊಲೀಸ್ ಕಸ್ಟಡಿಯಿಂದ ತಪ್ಪಿಸಿಕೊಳ್ಳಲು ಯತ್ನಿಸಿದ ಪರಿಣಾಮ ಪೊಲೀಸರು ಗುಂಡು ಹಾರಿಸಿದ್ದಾರೆ.
ಶಿವಮೊಗ್ಗದ ಹೊರವಲಯದಲ್ಲಿ ರಾತ್ರಿ ಸುಮಾರು 7-30 ರಿಂದ 8 ಗಂಟೆಗೆ ರೌಡಿ ಶೀಟರ್ ಬಂಕ್ ಬಾಲು ಕೊಲೆಯಾಗಿತ್ತು. ಇದರ ಬೆನ್ನು ಹತ್ತಿದ ಪೊಲೀಸರು ಪ್ರಮುಖ ಆರೋಪಿ ಸೀಗೆಹಟ್ಟಿ ನಿವಾಸಿ ಅನಿಲ್ ಅಲಿಯಾಸ್ ಅಂಬು ಎಂಬಾತನನ್ನು ವಶಕ್ಕೆ ಪಡಿದುಕೊಂಡಿದ್ದರು. ಈತನನ್ನ ಕುಂಸಿ ಠಾಣೆಯಲ್ಲಿ ವಿಚಾರಣೆ ನಡೆಸಲು ಕರೆದುಕೊಂಡಿರುವ ಪೊಲೀಸರು ಇತರೆ ಆರೋಪಿಗಳ ಎಲ್ಲಿ ಎತ್ತ ಎಂದು ವಿಚಾರಿಸಿದ್ದಾರೆ.
ವಿಚಾರಣೆ ವೇಳೆ ಅಂಬು ಗೆಜ್ಜೆನಹಳ್ಳಿಯಲ್ಲಿ ಇತರೆ ಆರೋಪಿಗಳಿದ್ದಾರೆ ಎಂದು ಹೇಳಿದ್ದಾನೆ. ಈತನನ್ನ ಕುಂಸಿ ಠಾಣೆ ಇನ್ಸ್ಪೆಕ್ಟರ್ ಜಗದೀಶ್ ಮತ್ತು ತುಂಗಾಠಾಣೆ ಇನ್ಸ್ಪೆಕ್ಟರ್ ಅಣ್ಣಪ್ಪರ ಜೊತೆ ವಾಹನದಲ್ಲಿ ಕೂರಿಸಿಕೊಂಡು ಹೋಗಿದ್ದಾರೆ. ಮಾರ್ಗ ಮದ್ಯೆಯಲ್ಲಿ ಆರೋಪಿ ಅಂಬು ಕುಂಸಿ ಠಾಣೆ ಇನ್ ಸ್ಪೆಕ್ಟರ್ ಕೈ ಕಡಿದು ಪರಾರಿಯಾಗಲು ಯತ್ನಿಸಿದ್ದಾನೆ.
ಇದರಿಂದ ಎಚ್ಚೆತ್ತುಕೊಂಡ ಪೊಲೀಸ್ ಇನ್ಸ್ಪೆಕ್ಟರ್ ಜಗದೀಶ್ ಅಮ್ಮುವಿನ ಮೊಣಕಾಲಿನ ಕೆಳಗೆ ಗುಂಡು ಹಾರಿಸಿದ್ದಾರೆ. ಅಮ್ಮುವನ್ನು ಮೆಗ್ಗಾನ್ ಆಸ್ಪತ್ರೆಗೆ ಸೇರಿಸಲಾಗಿದ್ದು, ಕುಂಸಿ ಹಾಗೂ ತುಂಗಾ ಠಾಣೆ ಪೊಲೀಸ್ ಇನ್ ಸ್ಪೆಕ್ಟರ್ಗಳನ್ನ ನಾರಾಯಣ ಹೃದಯಾಲಯಕ್ಕೆ ಸೇರಿಸಲಾಗಿದೆ.