Select Your Language

Notifications

webdunia
webdunia
webdunia
webdunia

ಸುಳ್ವಾಡಿ ವಿಷ ಪ್ರಸಾದ ಪ್ರಕರಣ: ಚಿನ್ನಪ್ಪಿ ಮೈಮೇಲೆ ಬಂದ ಕಿಚ್ಚುಗುತ್ತಿ ಮಾರಮ್ಮ ಹೇಳಿದ್ದೇನು?

ಸುಳ್ವಾಡಿ ವಿಷ ಪ್ರಸಾದ ಪ್ರಕರಣ: ಚಿನ್ನಪ್ಪಿ ಮೈಮೇಲೆ ಬಂದ ಕಿಚ್ಚುಗುತ್ತಿ ಮಾರಮ್ಮ ಹೇಳಿದ್ದೇನು?
, ಭಾನುವಾರ, 23 ಡಿಸೆಂಬರ್ 2018 (16:46 IST)
ಸುಳ್ವಾಡಿ ವಿಷ ಪ್ರಸಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರು ಮಂದಿ ಆರೋಪಿಗಳೆಂದು ಕೈ ಸನ್ನೆ ಮಾಡಲಾಗಿದೆ.
 ಚಾಮರಾಜನಗರ ಜಿಲ್ಲೆಯ ಹನೂರು ತಾಲ್ಲೂಕಿನಲ್ಲಿರುವ ಕಿಚ್ಚುಗುತ್ತಿ ಮಾರಮ್ಮ  ಹುಣ್ಣಿಮೆ ದಿನದಂದು
ಸುಳ್ವಾಡಿ ದೇಗುಲಕ್ಕೆ ತೆರಳಿದ್ದ  ಟ್ರಸ್ಟ್ ಕಾರ್ಯದರ್ಶಿ ಚಿನ್ನಪ್ಪಿ ಮೈಮೇಲೆ ಬಂದು ಈ ಸನ್ನೆ ಮಾಡಿದ್ದಾಳೆ.

 ಉರುಳುಸೇವೆ ಮಾಡಿದ ಚಿನ್ನಪ್ಪಿ ಮೈಮೇಲೆ ಮಾರಮ್ಮ ಆಹ್ವಾನವಾಗಿದ್ದು, ಬೇವಿನಸೊಪ್ಪನ್ನು ಹಿಡಿದು ದೇಗುಲವನ್ನು ಒಂದು ಸುತ್ತು ಉರುಳುಸೇವೆ ಮಾಡಿದ ಚಿನ್ನಪ್ಪಿಗೆ, ಯಾರು ತಾಯಿ ಪ್ರಸಾದಕ್ಕೆ ವಿಷ ಹಾಕಿದವರು ಎಂದು ಭಕ್ತರೊಬ್ಬರ ಪ್ರಶ್ನೆಗೆ 6 ಬೆರಳು ತೋರಿಸಿದ್ದಾರೆ ಚಿನ್ನಪ್ಪಿ.

 ದುರಂತಕ್ಕೆ ಸಂಬಂಧಿಸಿದಂತೆ ಈಗಾಗಲೇ ನಾಲ್ವರನ್ನು ಬಂಧಿಸಲಾಗಿದೆ. ಮತ್ತಿಬ್ಬರು ಯಾರು..? ಎಂಬ ಚರ್ಚೆ ಸುಳ್ವಾಡಿಯಲ್ಲಿ ಹುಟ್ಟಿಕೊಂಡಿದೆ. ಕಲ್ಲು-ಮುಳ್ಳುಗಳ ನಡುವೆ ಉರುಳುಸೇವೆ ಮಾಡಿದ ಚಿನ್ನಪ್ಪಿಯ ಹೊಟ್ಟೆಯಲ್ಲಿ ರಕ್ತ ಸ್ರಾವವಾಗುತ್ತಿದ್ದರೂ ಉರುಳು ಸೇವೆ ನಡೆಸಿ ಪೂರೈಸಿದರು.  




Share this Story:

Follow Webdunia kannada

ಮುಂದಿನ ಸುದ್ದಿ

ಮೈಸೂರು - ಬೆಂಗಳೂರು ನಡುವೆ ಹೊಸ ರೈಲು ಸಂಚಾರ ಆರಂಭ