Select Your Language

Notifications

webdunia
webdunia
webdunia
webdunia

ಮಲ್ಪೆ ಬಂದರಿನಿಂದ ಮೀನುಗಾರಿಕೆಗೆ ತೆರಳಿದ್ದ 8 ಜನ ಮೀನುಗಾರರು ನಾಪತ್ತೆ; ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು

ಮಲ್ಪೆ ಬಂದರಿನಿಂದ ಮೀನುಗಾರಿಕೆಗೆ ತೆರಳಿದ್ದ 8 ಜನ ಮೀನುಗಾರರು ನಾಪತ್ತೆ; ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು
ಉಡುಪಿ , ಸೋಮವಾರ, 24 ಡಿಸೆಂಬರ್ 2018 (12:28 IST)
ಉಡುಪಿ : ಉಡುಪಿಯ ಮಲ್ಪೆ ಬಂದುರಿನಿಂದ ಮೀನುಗಾರಿಕೆಗೆ ತೆರಳಿದ್ದ 8 ಜನ ಮೀನುಗಾರರು ಬೋಟ್ ಸಮೇತ ನಾಪತ್ತೆಯಾಗಿದ್ದಾರೆ.


ಬೋಟ್ ಹೆಸರು ಸುವರ್ಣ ತ್ರಿಭುಜವಾಗಿದ್ದು, , ಬೋಟ್ ಮಾಲೀಕ ಬಡಾನಿಡಿಯೂರಿನ ಚಂದ್ರಶೇಖರ್ ಎಂಬುದಾಗಿ  ತಿಳಿದುಬಂದಿದೆ,  ದಾಮೋದರ, ಲಕ್ಷ್ಮಣ್, ಸತೀಶ್, ರವಿ, ಹರೀಶ್, ರಮೇಶ್, ಜೋಗಯ್ಯ ನಾಪತ್ತೆಯಾದ ಮೀನುಗಾರರು. ಇವರೆಲ್ಲ ಡಿಸೆಂಬರ್ 13 ರಂದು ರಾತ್ರಿ 11 ಗಂಟೆ ಸುಮಾರಿಗೆ ಮಲ್ಪೆ ಬಂದರಿನಿಂದ ಆಳ ಸಮುದ್ರ ಮೀನುಗಾರಿಕೆಗೆ ತೆರಳಿದ್ದರು, ಡಿಸೆಂಬರ್ 15 ರ ರಾತ್ರಿ 1 ಗಂಟೆಯವರಗೆ ಸಂಪರ್ಕದಲ್ಲಿದ್ದ ಇವರು ನಂತರ ಸಂಪರ್ಕಕ್ಕೆ ಸಿಗದೇ ನಾಪತ್ತೆಯಾಗಿದ್ದಾರೆ.


ನಾಪತ್ತೆಯಾದವರನ್ನು ಪತ್ತೆಹಚ್ಚಲು ಕರಾವಳಿ ಕಾವಲು ಪಡೆ ಪ್ರಯತ್ನ ನಡೆಸಿದ್ದು ,ಆದರೆ  ನಾಪತ್ತೆಯಾದವರನ್ನು ಈವರೆಗೂ ಪತ್ತೆಯಾಗಿಲ್ಲದ ಹಿನ್ನಲೆಯಲ್ಲಿ ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ನಾನು ರಾಜೀನಾಮೆ ನೀಡಲು ಸಿದ್ಧ- ಶಾಸಕ ರಮೇಶ್ ಜಾರಕಿಹೊಳಿ