Select Your Language

Notifications

webdunia
webdunia
webdunia
webdunia

ಮರಳಿಗಾಗಿ ತಾಲೂಕು ಕಚೇರಿ ಎದುರು ಉಪವಾಸ ಸತ್ಯಾಗ್ರಹ ಆರಂಭಿಸಿದ ಶಾಸಕ ರೇಣುಕಾಚಾರ್ಯ

ಮರಳಿಗಾಗಿ ತಾಲೂಕು ಕಚೇರಿ ಎದುರು ಉಪವಾಸ ಸತ್ಯಾಗ್ರಹ ಆರಂಭಿಸಿದ ಶಾಸಕ ರೇಣುಕಾಚಾರ್ಯ
ದಾವಣಗೆರೆ , ಮಂಗಳವಾರ, 27 ನವೆಂಬರ್ 2018 (12:07 IST)
ದಾವಣಗೆರೆ : ಮರಳು ಸಿಗದೇ ಕಟ್ಟಡದ ಮಾಲೀಕರು ಹಾಗೂ ಕೆಲಸಗಾರು ಪರದಾಡುವಂತಾಗಿದೆ. ಈ ಹಿನ್ನಲೆಯಲ್ಲಿ ಇದೀಗ ಬಿಜೆಪಿಯ ಹೊನ್ನಾಳಿಯ ಶಾಸಕ ಎಂ.ಪಿ. ರೇಣುಕಾಚಾರ್ಯ ಅವರು ಮರಳಿಗಾಗಿ ನ್ಯಾಮತಿ ತಾಲೂಕು ಕಚೇರಿ ಎದುರು ಉಪವಾಸ ಸತ್ಯಾಗ್ರಹ ಆರಂಭಿಸಿದ್ದಾರೆ.


ಕಳೆದ ಸೋಮವಾರ ಶಾಸಕ ರೇಣುಕಾಚಾರ್ಯ ಅವರು ತುಂಗಾಭದ್ರಾ ನದಿಗೆ ಇಳಿದು ಸುತ್ತಮುತ್ತಲಿನ ನೂರಾರು ಎತ್ತಿನಗಾಡಿಗಳಲ್ಲಿ ಮರಳು ತುಂಬಿಸಿದ್ದ ಕಾರಣ ರೇಣುಕಾಚಾರ್ಯ ಸೇರಿ ಮೂವರು ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು.


ಇದೀಗ ಈ ಬಗ್ಗೆ ಮತ್ತೆ ಪ್ರತಿಭಟನೆ ಆರಂಭಿಸಿರುವ ಶಾಸಕ ರೇಣುಕಾಚಾರ್ಯ, ಹೊನ್ನಾಳಿ ಹಾಗೂ ನ್ಯಾಮತಿ ತಾಲೂಕುಗಳಿಗೆ ಸಮರ್ಪಕವಾಗಿ ಮರಳನ್ನು ಕೊಡಬೇಕು ಎಂದು ಆಗ್ರಹಿಸಿ ನ್ಯಾಮತಿ ತಾಲೂಕು ಕಚೇರಿ ಎದುರು ಅಮರಣಾಂತ ಉಪವಾಸ ಸತ್ಯಾಗ್ರಹ ಆರಂಭಿಸಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ನಾಳೆ ಕುಟುಂಬಸ್ಥರಿಂದ ಅಂಬರೀಶ್ ಚಿತಾಭಸ್ಮ ವಿಸರ್ಜನೆ