Select Your Language

Notifications

webdunia
webdunia
webdunia
webdunia

ಮಂಚಕ್ಕೆ ಕರೆದ ಬ್ಯಾಂಕ್ ಮ್ಯಾನೇಜರ್ ಗೆ ಚಪ್ಪಲಿಯಲ್ಲಿ ಹೊಡೆದ ಯುವತಿ

ಮಂಚಕ್ಕೆ  ಕರೆದ ಬ್ಯಾಂಕ್ ಮ್ಯಾನೇಜರ್ ಗೆ ಚಪ್ಪಲಿಯಲ್ಲಿ ಹೊಡೆದ ಯುವತಿ
ದಾವಣಗೆರೆ , ಮಂಗಳವಾರ, 16 ಅಕ್ಟೋಬರ್ 2018 (07:10 IST)
ದಾವಣಗೆರೆ : ಇತ್ತೀಚೆನ ದಿನಗಳಲ್ಲಿ ಹೆಣ್ನುಮಕ್ಕಳ ಕಷ್ಟಕ್ಕೆ ಸಹಕರಿಸುವ ಬದಲು ಅದನ್ನೇ ದಾಳವಾಗಿಟ್ಟುಕೊಂಡು ಮಂಚ್ಚಕ್ಕೆ ಕರೆಯುವ ಕಾಮುಕರೇ ಹೆಚ್ಚಾಗಿದ್ದಾರೆ . ಇದೇರೀತಿಯ ಘಟನೆ ದಾವಣಗೆರೆಯ ನಿಜಲಿಂಗಪ್ಪ ಬಡಾವಣೆಯಲ್ಲಿ ನಡೆದಿದೆ.


ಯುವತಿಯೊಬ್ಬಳು ಬ್ಯೂಟಿ ಪಾರ್ಲರ್ ತೆರೆಯಲು ಡಿಎಚ್‍ಎಫ್‍ಎಲ್ ಬ್ಯಾಂಕಿನ ಮ್ಯಾನೇಜರ್ ದೇವಯ್ಯ ನಲ್ಲಿ 2 ಲಕ್ಷ ರೂಪಾಯಿ ಬ್ಯಾಂಕ್ ಲೋನ್ ನೀಡುವಂತೆ ಕೇಳಿದಾಗ ಆತ ಲೋನ್ ವಿಚಾರ ಮಾತನಾಡುವುದಾಗಿ  ಮನೆಗೆ ಕರೆದು ಯುವತಿಯ ಜೊತೆ ಅಸಭ್ಯವಾಗಿ ವರ್ತಿಸಿದ್ದಾನೆ.


ಆದರೆ ಈ ಆಮಿಷಗಳಿಗೆ ಬಲಿಯಾಗದ ಯುವತಿ ಕೋಪಗೊಂಡು ಕೈಗೆ ಸಿಕ್ಕಿದ ಬೆತ್ತದಿಂದ ಮ್ಯಾನೇಜರ್ ನನ್ನು ಹಿಗ್ಗಾಮಗ್ಗಾ ಥಳಿಸಿದ್ದಾಳೆ. ಅಷ್ಟೇ ಅಲ್ಲದೇ ಮನೆಯಿಂದ ಹೊರಗೆಳೆದುಕೊಂಡು ಬಂದು ಚಪ್ಪಲಿಯಲ್ಲಿ ಹೊಡೆದಿದ್ದಾಳೆ. ಆಗ ತಕ್ಷಣ ಸ್ಥಳಕ್ಕೆ ಆಗಮಿಸಿದ ಪೊಲೀಸರು ಬ್ಯಾಂಕ್ ಮ್ಯಾನೇಜರ್ ನನ್ನು ವಶಕ್ಕೆ ಪಡೆದು, ಆತನ ವಿರುದ್ಧ ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ನಾಯಿಗೆ ಬೈದಿದಕ್ಕೆ ವಿದ್ಯಾರ್ಥಿಯ ಮೇಲೆ ಗುಂಡು ಹಾರಿಸಿ ಕೊಲೆಗೆ ಯತ್ನ