Publish Date: Mon, 15 Oct 2018 (12:52 IST)
Updated Date: Mon, 15 Oct 2018 (12:56 IST)
ಪ್ರಮುಖ ಬಿಎಂ ರಸ್ತೆಯ ಒತ್ತುವರಿ ಕಟ್ಟಡಗಳಿಗೆ ಮಾರ್ಕಿಂಗ್ ಕಾರ್ಯ ಶುರುವಾಗಿದೆ. ಮಹಿಳಾ ಡಿಸಿ ಇಟ್ಟ ದಿಟ್ಟ ಹೆಜ್ಜೆಗೆ ಅಕ್ರಮ ಕಟ್ಟಡಗಳ ಮಾಲೀಕರು ನಲುಗಿದ್ದಾರೆ.
ಹಾಸನ ನಗರದ ಬಿಎಂ ರಸ್ತೆಯ ಒತ್ತುವರಿ ಕಟ್ಟಡಗಳಿಗೆ ಮಾರ್ಕಿಂಗ್ ಕಾರ್ಯ ಶುರುವಾಗಿದೆ. ಡಿಸಿ ರೋಹಿಣಿ ಸಿಂಧೂರಿ ದಿಟ್ಡ ಹೆಜ್ಜೆಗೆ ನಲುಗಿದ ಅಕ್ರಮ ಕಟ್ಟಡ ಮಾಲೀಕರು ಪರಿತಪಿಸುತ್ತಿದ್ದಾರೆ.
ನಗರಸಭೆ ಅಧಿಕಾರಿಗಳು ಮತ್ತು ಸಿಬ್ಬಂದಿಗಳಿಂದ ಮಾರ್ಕಿಂಗ್ ಕಾರ್ಯ ಪ್ರಾರಂಭವಾಗಿದೆ. ಬಿಎಂ ರಸ್ತೆ ಪ್ರಸಿದ್ಧ ಕಟ್ಟಡಗಳು ನೆಲಸಮ ಆಗುವ ಸಮಯ ಸನ್ನಿಹತವಾದಂತಾಗಿದೆ. ಈ ಕುರಿತು ಹೈಕೋರ್ಟ್ ಮೆಟ್ಟಿಲೇರಿ ಛೀಮಾರಿ ಹಾಕಿಸಿಕೊಂಡು ವಾಪಾಸಾಗಿದ್ದ ಅಕ್ರಮ ಕಟ್ಟಡ ಮಾಲೀಕರಿಗೆ ಡಿಸಿ ಶಾಕ್ ನೀಡಿದ್ದಾರೆ.
ಅಕ್ರಮಎಂದು ತಿಳಿದರೂ ನಗರಸಭೆಯಿಂದ ಪರವನಗಿ ನೀಡಿದ್ದ ಅಧಿಕಾರಿಗಳನ್ನು ಅಮಾನತು ಗೊಳಿಸಿ ಹೈಕೋರ್ಟ್ ಆದೇಶ ನೀಡಿದೆ. ಹೀಗಾಗಿ ಡಿಸಿ ರೋಹಿಣಿ ಸಿಂಧೂರಿ ಅಕ್ರಮ ಕಟ್ಟಡಗಳ ತೆರವಿಗೆ ದಿಟ್ಟ ಕ್ರಮ ಕೈಗೊಂಡಿದ್ದಾರೆ.