Publish Date: Mon, 20 Nov 2017 (18:31 IST)
Updated Date: Mon, 20 Nov 2017 (18:33 IST)
ಮುಂದಿನ ತಿಂಗಳಾಂತ್ಯಕ್ಕೆ ನಟ ದರ್ಶನ ಮನೆ ಸೇರಿದಂತೆ 69 ಮನೆಗಳನ್ನು ತೆರವುಗೊಳಿಸಲಾಗುವುದು ಎಂದು ಜಿಲ್ಲಾಧಿಕಾರಿ ವಿ.ಶಂಕರ್ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜಕಾಲುವೆ ಮೇಲೆ ಮನೆಗಳನ್ನು ನಿರ್ಮಿಸಿ ನ್ಯಾಯಾಲಯದಿಂದ ತಡೆಯಾಜ್ಞೆ ತಂದಿದ್ದ ಮಾಲೀಕರಿಗೆ ಈಗಾಗಲೇ ನೋಟಿಸ್ ಜಾರಿಗೊಳಿಸಲಾಗಿದೆ. ಮುಂದಿನ ತಿಂಗಳೊಳಗಾಗಿ ಮನೆಗಳನ್ನುತೆರವುಗೊಳಿಸಲಾಗುವುದು ಎಂದು ತಿಳಿಸಿದ್ದಾರೆ.
ಹಿರಿಯ ಕಾಂಗ್ರೆಸ್ ಮುಖಂಡ ಶಾಮನೂರ್ ಶಿವಂಶಂಕರಪ್ಪ ಅವರ ಆಸ್ಪತ್ರೆಯ ಕಟ್ಟಡ ಕೂಡಾ ತಡೆಯಾಜ್ಞೆ ಅವಧಿ ಮುಕ್ತಾಯಗೊಂಡ ನಂತರ ತೆರವುಗೊಳಿಸಲಾಗುವುದು ಎಂದು ಹೇಳಿದ್ದಾರೆ.
ರಾಜಕಾಲುವೆ ಮೇಲೆ ಕಟ್ಟಿದ ಎಲ್ಲಾ ಮನೆಗಳನ್ನು, ಶಾಪಿಂಗ್ ಮಾಲ್ ಸೇರಿದಂತೆ .ಯಾವುದೇ ಕಟ್ಟಡವಿದ್ದರೂ ಅದನ್ನು ನೆಲಸಮ ಮಾಡುತ್ತೇವೆ ಎಂದು ಜಿಲ್ಲಾಧಿಕಾರಿ ವಿ.ಶಂಕರ್ ಎಚ್ಚರಿಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.