Select Your Language

Notifications

webdunia
webdunia
webdunia
webdunia

ದೀಪಿಕಾ ಪಡುಕೋಣೆ ಪರ ಸಚಿವ ಡಿ.ಕೆ.ಶಿವಕುಮಾರ್ ಬ್ಯಾಟಿಂಗ್

ದೀಪಿಕಾ ಪಡುಕೋಣೆ ಪರ ಸಚಿವ ಡಿ.ಕೆ.ಶಿವಕುಮಾರ್ ಬ್ಯಾಟಿಂಗ್
ಬೆಂಗಳೂರು , ಸೋಮವಾರ, 20 ನವೆಂಬರ್ 2017 (12:25 IST)
ಬಾಲಿವುಡ್‌ನ ಪದ್ಮಾವತಿ ಚಿತ್ರ ವಿವಾದದಿಂದಾಗಿ ಕನ್ನಡಾಂಬೆಯ ಹೆಮ್ಮೆಯ ಪುತ್ರಿಯಾದ ದೀಪಿಕಾ ಪಡುಕೋಣೆಗೆ ಜೀವ ಬೆದರಿಕೆಯಿರುವುದರಿಂದ ಸೂಕ್ತ ರಕ್ಷಣೆ ನೀಡುವಂತೆ ಸಿಎಂ ಸಿದ್ದರಾಮಯ್ಯ ಅವರಿಗೆ ಪತ್ರ ಬರೆಯುವುದಾಗಿ ಇಂಧನ ಖಾತೆ ಸಚಿವ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ. 
 
ದೀಪಿಕಾ ಪಡುಕೋಣೆ ತಲೆಗೆ 10 ಕೋಟಿ ರೂಪಾಯಿ ಆಫರ್ ನೀಡಿರುವ ಹರಿಯಾಣಾ ಬಿಜೆಪಿ ಮುಖಂಡ ಸುರಜ್‌ಪಾಲ್ ಅಮು, ವಿರುದ್ಧ ಟ್ವೀಟ್ ಮಾಡಿ ತಮ್ಮ ಆಕ್ರೋಶ ಹೊರಹಾಕಿದ್ದಾರೆ.
 
ಬಾಲಿವುಡ್ ಖ್ಯಾತ ನಟಿ ದೀಪಿಕಾ ಪಡುಕೋಣೆ ಕನ್ನಡಾಂಬೆಯ ಹೆಮ್ಮೆಯ ಪುತ್ರಿಯಾಗಿದ್ದು,ದೇಶದ ಖ್ಯಾತ ಕ್ರೀಡಾಪಟುವಿನ ಪುತ್ರಿಯಾಗಿದ್ದಾರೆ. ಬಿಜೆಪಿ ಕೂಡಲೇ ದೀಪಿಕಾರ ಕ್ಷಮೆಯಾಚಿಸಬೇಕು. ಮುಂದೆ ಇಂತಹ ಹೇಳಿಕಗಳು ಬಾರದಂತೆ ನೋಡಿಕೊಳ್ಳಬೇಕು ಎಂದು ಬಿಜೆಪಿ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
 
ದೀಪಿಕಾಗೆ ದೈಹಿಕ ಹಾನಿಯನ್ನು ಉಂಟುಮಾಡುವಂತೆ ಹಲವಾರು ಫ್ರಿಂಜ್ ಗುಂಪುಗಳು ಸಾರ್ವಜನಿಕವಾಗಿ ಬೆದರಿಕೆಯೊಡ್ಡಿದೆ. ಅವರ ಪ್ರತಿಭಟನೆ ಹಿನ್ನೆಲೆಯಲ್ಲಿ, ಸಂಜಯ್ ಲೀಲಾ ಭಾನ್ಸಾಲಿ ನಿರ್ದೇಶನದ ಪದ್ಮಾವತಿಯ ಡಿಸೆಂಬರ್ 1 ಬಿಡುಗಡೆಗೆ ಮುಂದೂಡಲಾಗಿದೆ. ಪಡುಕೋಣೆ ಮಾಜಿ ಆಲ್ ಇಂಗ್ಲೆಂಡ್ ಓಪನ್ ಚಾಂಪಿಯನ್ ಪ್ರಕಾಶ್ ಪಡುಕೋಣೆ ಪುತ್ರಿ ಮತ್ತು ಬೆಂಗಳೂರಿನಲ್ಲಿ ಶಿಕ್ಷಣವನ್ನು ಪೂರ್ಣಗೊಳಿಸಿದ್ದಾರೆ.
 
ರಾಜಸ್ಥಾನದ ಕರಣಿ ಸೇನಾ ಸೇರಿದಂತೆ ಅನೇಕ ಸಂಘಟನೆಗಳು ದೀಪಿಕಾಗೆ ದೀವಬೆದರಿಕೆ ಹಾಕಿವೆ. ಕೇಂದ್ರ ಸರಕಾರ ಮತ್ತು ರಾಜ್ಯ ಸರಕಾರಗಳು ದೀಪಿಕಾಗೆ ಭಾರಿ ಭಧ್ರತೆಯನ್ನು ಒದಗಿಸಬೇಕು ಎಂದು ಇಂಧನ ಖಾತೆ ಸಚಿವ ಡಿ.ಕೆ.ಶಿವಕುಮಾರ್ ಒತ್ತಾಯಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

Share this Story:

Follow Webdunia kannada

ಮುಂದಿನ ಸುದ್ದಿ

ಉ.ಕರ್ನಾಟಕ ಅಭಿವೃದ್ಧಿ ಚರ್ಚೆಗೆ ಉ.ಕ ಭಾಗದ ಶಾಸಕರೇ ಗೈರು?