Webdunia - Bharat's app for daily news and videos

Install App

Select Your Language

Notifications

webdunia
webdunia
webdunia
webdunia

ರಸ್ತೆಯ ಮೇಲೆ ಮೂತ್ರ ವಿಸರ್ಜಿಸಿ ವಿವಾದಕ್ಕೀಡಾದ ಮಹಾರಾಷ್ಟ್ರ ಸಚಿವ

webdunia
ಸೋಮವಾರ, 20 ನವೆಂಬರ್ 2017 (13:16 IST)
ಮಹಾರಾಷ್ಟ್ರದ ಬಿಜೆಪಿ ಸಚಿವರೊಬ್ಬರು ರಸ್ತೆ ಬದಿಯಲ್ಲಿ ಮೂತ್ರ ಮಾಡುತ್ತಿರುವ ವಿಡಿಯೋ ದೃಶ್ಯ ವೈರಲ್ ಆಗಿದ್ದು ವಿವಾದಕ್ಕೆ ಕಾರಣವಾಗಿದೆ.
ಪ್ರಧಾನಮಂತ್ರಿ ನರೇಂದ್ರ ಮೋದಿ ಸ್ವಚ್ಚತಾ ಅಭಿಯಾನ, ಶೌಚಾಲಯದ ಬಗ್ಗೆ ಜನರಿಗೆ ಅರಿವು ಮೂಡಿಸುವಲ್ಲಿ ನಿರತರಾಗಿರುವ ಮಧ್ಯೆ ಅವರದೇ ಪಕ್ಷದ ಜಲಸಂಪನ್ಮೂಲ ಖಾತೆ ಸಚಿವರಾಗಿರುವ ರಾಮ್ ಶಿಂಧೆ, ಕಾರಿನಲ್ಲಿ ಸೋಲಾಪುರ್-ಬಾರ್ಷಿ ಮಾರ್ಗವಾಗಿ ತೆರಳುತ್ತಿರುವ ಸಂದರ್ಭದಲ್ಲಿ ರಸ್ತೆಯ ಮೇಲೆ ಮೂತ್ರ ಮಾಡಿ ವಿವಾದಕ್ಕೆ ಕಾರಣವಾಗಿದ್ದಾರೆ.
 
ಸುಮಾರು ಒಂದು ತಿಂಗಳಿನಿಂದ ಸರಕಾರದ ಮಹತ್ವದ ಯೋಜನೆಯಾದ ಜಲಯುಕ್ತ ಶಿಬಿರ ಯೋಜನೆ ಜಾರಿಗಾಗಿ ರಾಜ್ಯದಾದ್ಯಂತ ಪ್ರವಾಸ ಮಾಡುತ್ತಿದ್ದೇನೆ. ನಿರಂತರವಾಗಿ ಪ್ರವಾಸ ಮಾಡುತ್ತಿದ್ದರಿಂದ ಅನಾರೋಗ್ಯ ಎದುರಾಗಿತ್ತು ಎಂದು ತಿಳಿಸಿದ್ದಾರೆ. 
 
ನಾನು ಜ್ವರದಿಂದ ಬಳಲುತ್ತಿದ್ದರಿಂದ ಮೂತ್ರ ಮಾಡಲು ಶೌಚಾಲಯಕ್ಕಾಗಿ ಹುಡುಕಾಟ ನಡೆಸಿದರೂ ಕಾಣಿಸಲಿಲ್ಲ. ಆದ್ದರಿಂದ ರಸ್ತೆಯ ಮೇಲೆ ಮೂತ್ರ ಮಾಡಬೇಕಾಯಿತು ಎಂದು ಸಚಿವ ರಾಮ್ ಶಿಂಧೆ ಪ್ರತಿಕ್ರಿಯೆ ನೀಡಿದ್ದಾರೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

ಸೂಕ್ತ ಸಂಗಾತಿ ಬೇಕಾ? ಕನ್ನಡ ಮ್ಯಾಟ್ರಿಮೊನಿಯಲ್ಲಿ - ನೋಂದಣಿ ಉಚಿತ!
Share this Story:

Follow Webdunia kannada

ಮುಂದಿನ ಸುದ್ದಿ

ವಿಪಕ್ಷಗಳು ಆರೋಪ ಸಾಬೀತು ಮಾಡಿದ್ರೆ ಸಚಿವ ಸ್ಥಾನಕ್ಕೆ ರಾಜೀನಾಮೆ: ರಾಯರೆಡ್ಡಿ