Select Your Language

Notifications

webdunia
webdunia
webdunia
webdunia

ಇದೆಂಥಾ ಸ್ವಚ್ಚ ಭಾರತ ಕೇಂದ್ರ ಸಚಿವರೇ..?: ಪಬ್ಲಿಕ್ ನಲ್ಲೇ ಗೋಡೆ ಮೇಲೆ ಸೂಸೂ ಮಾಡಿದ್ರಲ್ಲಾ..!

ಇದೆಂಥಾ ಸ್ವಚ್ಚ ಭಾರತ ಕೇಂದ್ರ ಸಚಿವರೇ..?: ಪಬ್ಲಿಕ್ ನಲ್ಲೇ ಗೋಡೆ ಮೇಲೆ ಸೂಸೂ ಮಾಡಿದ್ರಲ್ಲಾ..!
ನವದೆಹಲಿ , ಗುರುವಾರ, 29 ಜೂನ್ 2017 (14:03 IST)
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿಯೋಜನೆಗಳಾದ ಸ್ವಚ್ಚ ಭಾರತ, ಬಯಲು ಶೌಚ ಮುಕ್ತ ಯೋಜನೆಗಳನ್ನು ಜಾರಿಗೆ ತರಬೇಕಾದ ಸಚಿವರೇ ಸಾರ್ವಜನಿಕ ಸ್ಥಳಗಳಲ್ಲಿ, ಅದೂ ಗೋಡೆ ಮೇಲೆ ಮೂತ್ರ ವಿಸರ್ಜನೆ ಮಾಡೋದು ಅಂದ್ರೇನು.. ನಿಜ ಕೇಂದ್ರ ಸಚಿವರೊಬ್ಬರು ಇಂತಹದೊಂದು ಅಪಚಾರವೆಸಗಿದ್ದಾರೆ.
 
ಕೇಂದ್ರ ಕೃಷಿ ಸಚಿವ ರಾಧಾ ಮೋಹನ್‌ ಸಿಂಗ್‌ ಅವರು ಸಾರ್ವಜನಿಕವಾಗಿ ಮೂತ್ರ ವಿಸರ್ಜನೆ ಮಾಡುತ್ತಿರುವ ಫೋಟೋಗಳು ಈಗ ಸಾಮಾಜಿಕ ಜಾಲತಾಣಗಲಲ್ಲಿ ವೈರಲ್ ಅಗಿದ್ದು, ವ್ಯಾಪಕ ಟೀಕೆಗಳು ವ್ಯಕ್ತವಾಗಿವೆ.
 
ರಸ್ತೆ ಬದಿ ಕಾರು ನಿಲ್ಲಿಸಿ ಕಟ್ಟಡವೊಂದರ ಗೊಡೆಗೆ ತಾಗಿದಂತೆ ನಿಂತು ರಾಧಾ ಮೋಹನ್‌ ಸಿಂಗ್‌ ಅವರು ಮೂತ್ರ ವಿಸರ್ಜನೆ ಮಾಡಿದ್ದಾರೆ. ಈ ವೇಳೆ ಭದ್ರತಾ ಪಡೆಗಳು ಅವರ ರಕ್ಷಣೆಗೆ ನಿಂತಿರುವುದು ಈ ಫೋಟೋಗಳಲ್ಲಿ ಕಂಡು ಬಂದಿದೆ. ಕೇಂದ್ರ ಸಚಿವರೇ ಇದೇನಾ ಸ್ವಚ್ಛ ಭಾರತ ಎಂದು ಜನ ಕೇಳುತ್ತಿದ್ದಾರೆ.
 

Share this Story:

Follow Webdunia kannada

ಮುಂದಿನ ಸುದ್ದಿ

ಗೋರಕ್ಷಣೆ ಹೆಸರಲ್ಲಿ ಹಿಂಸೆ ಸರಿಯಲ್ಲ: ಪ್ರಧಾನಿ ಮೋದಿ ತಾಕೀತು