ಪತ್ನಿಯ ಜೊತೆ ಜಗಳವಾಡಿ ತಂದೆಯನ್ನು ಕೊಂದ ಪೊಲೀಸ್ ಕಾನ್ಸ್‌ಸ್ಟೇಬಲ್

ಸೋಮವಾರ, 24 ಡಿಸೆಂಬರ್ 2018 (07:20 IST)
ಹೈದರಾಬಾದ್ : ಕ್ಷುಲಕ ಕಾರಣಕ್ಕೆ ಪತ್ನಿಯ ಜೊತೆಗೆ ಜಗಳವಾಡಿದ ಪೊಲೀಸ್ ಕಾನ್ಸ್‌ಸ್ಟೇಬಲ್ ಒಬ್ಬ ಕೋಪದಿಂದ ತನ್ನ ಅಪ್ಪನನ್ನು ಕೊಂದ ವಿಚಿತ್ರ ಘಟನೆ ಮುಶಿರಾಬಾದ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.


58 ವರ್ಷದ ಎಲ್ಲಯ್ಯ  ಮಗನ ಕೈಯಿಂದ ಕೊಲೆಯಾದ ದುರ್ದೈವಿ ತಂದೆ. ಬಿ ವೆಂಕಟೇಶ್ ತಂದೆಯನ್ನು ಕೊಂದ ಆರೋಪಿಯಾಗಿದ್ದು, ಈತ  2010ರ ಬ್ಯಾಚ್ ನ ಕಾನ್ಸ್ ಸ್ಟೇಬಲ್ ಆಗಿದ್ದಾನೆ.  ಈತ ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದು, ಚಿಕಿತ್ಸೆ ಪಡೆಯುತ್ತಿದ್ದನು ಎಂಬುದಾಗಿ ತಿಳಿದುಬಂದಿದೆ. ಈತನಿಗೆ ಮೂವರು ಮಕ್ಕಳಿದ್ದು, ಕ್ಷುಲ್ಲಕ ವಿಚಾರಕ್ಕೆ ಸಂಬಂಧಿಸಿದಂತೆ ಆಗಾಗ ಪತ್ನಿ ಜೊತೆ ಜಗಳವಾಡುತ್ತಿದ್ದನು.


ಶುಕ್ರವಾರದಂದು ಕೂಡ ಅದೇ ರೀತಿ ಜಗಳವಾಡಿದ್ದು, ಕೋಪಗೊಂಡ ಆತ ಅಲ್ಲೇ ಇದ್ದ ತಂದೆ ಎಲ್ಲಯ್ಯನ ಮುಖಕ್ಕೆ ಟವೆಲ್ ನಿಂದ ಬಿಗಿಹಿಡಿದು ಕತ್ತು ಹಿಸುಕಿದ್ದಾನೆ. ಇಷ್ಟು ಮಾತ್ರವಲ್ಲದೇ ವೆಂಕಟೇಶ್ ಎದೆ ಹಾಗೂ ದೇಹದ ಇತರ ಭಾಗಗಳಿಗೆ ಮನಬಂದಂತೆ ಚೂರಿಯಿಂದ ಇರಿದು ಕೊಲೆ ಮಾಡಿದ್ದಾನೆ.


ಈ ಘಟನೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲಿಸಿಕೊಂಡ  ಪೊಲೀಸರು ಆರೋಪಿ ಬಿ ವೆಂಕಟೇಶ್ ನನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ಮಗು ನೀರಲ್ಲಿ ಮುಳುಗಿ ಸಾವನಪ್ಪಿದ್ದನ್ನು ಕಂಡು ತಂದೆ ಮಾಡಿದ್ದೇನು ಗೊತ್ತಾ?