Select Your Language

Notifications

webdunia
webdunia
webdunia
webdunia

ಮಗು ನೀರಲ್ಲಿ ಮುಳುಗಿ ಸಾವನಪ್ಪಿದ್ದನ್ನು ಕಂಡು ತಂದೆ ಮಾಡಿದ್ದೇನು ಗೊತ್ತಾ?

ಮಗು ನೀರಲ್ಲಿ ಮುಳುಗಿ ಸಾವನಪ್ಪಿದ್ದನ್ನು ಕಂಡು ತಂದೆ ಮಾಡಿದ್ದೇನು ಗೊತ್ತಾ?
ಕೊಯಮತ್ತೂರು , ಸೋಮವಾರ, 24 ಡಿಸೆಂಬರ್ 2018 (07:15 IST)
ಕೊಯಮತ್ತೂರು : 2 ವರ್ಷದ ಮಗ ಆಕಸ್ಮಿಕವಾಗಿ ನೀರಿನ ಟ್ಯಾಂಕ್ ಗೆ ಬಿದ್ದು ಸಾವನಪ್ಪಿದ್ದನ್ನು ಕಂಡು  ಆತನ  ತಂದೆ ಕೂಡ ಆತ್ಮಹತ್ಯೆಗೆ ಶರಣಾದ ಘಟನೆ ತಮಿಳುನಾಡಿನಲ್ಲಿ ನಡೆದಿದೆ.


ತಂದೆ ಮಣಿಕಂದನ್ (32) ಹಾಗೂ  ಮಗ ದೇಜಶ್ವಿನ್ (2 ) ಮೃತಪಟ್ಟ ದುರ್ದೈವಿಗಳು.  ತಂದೆ ಮಣಿಕಂದನ್ ತನ್ನ 5 ವರ್ಷದ ಮಗಳ ಜೊತೆ ಕಣ್ಣು ಮುಚ್ಚಾಲೆ ಆಟ ಆಡುತ್ತಿದ್ದರು. ಆಗ ಅಲ್ಲೆ ಆಡುತ್ತಿದ್ದ 2ವರ್ಷದ ಮಗ ದೇಜಶ್ವಿನ್ ನೆಲಮಟ್ಟದಲ್ಲಿದ್ದ ತೆರೆದ ನೀರಿನ ಟ್ಯಾಂಕ್‌ ಗೆ ಬಿದ್ದು ಸಾವನಪ್ಪಿದ್ದಾನೆ. ಮಗ ಕಾಣದಿದ್ದಾಗ ಹುಡುಕಾಡಿದ ತಂದೆಗೆ ಮಗನ ಶವ ನೀರಿನ ಟ್ಯಾಂಕ್‌ನಲ್ಲಿ ತೇಲುತ್ತಿರುವುದು ಕಾಣಿಸಿದೆ. ಇದರಿಂದ ಆಘಾತಕ್ಕೊಳಗಾದ ಮಣಿಕಂದನ್ ರೂಂಗೆ ಹೋಗಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.


ತಂದೆ ಕಾಣಿಸದಿದ್ದಾಗ ಮಗಳು ಮಲಗಿದ್ದ  ತಾಯಿಯನ್ನು ಎಬ್ಬಿಸಿದ್ದಾಳೆ. ಆಗ ತಾಯಿ ರೂಂ ಬಾಗಿಲು ತೆಗೆಯಲಾಗದೆ ಕಿಟಕಿಯಿಂದ ನೋಡಿದಾಗ ಪತಿ ನೇಣಿನ ಕುಣಿಕೆಯಲ್ಲಿ ತೂಗುತ್ತಿರುವುದು ಕಾಣಿಸಿದೆ. ನಂತರ ಆಕೆ ಕಿರುಚಾಡಿದ್ದು, ಇದನ್ನು ಕೇಳಿ ಓಡಿಬಂದ ನೆರೆಹೊರೆಯವರು ಮಗುವನ್ನು ಹುಡುಕಿದಾಗ ಮಗುವಿನ ಶವ ನೀರಿನ ಟ್ಯಾಂಕಿನಲ್ಲಿ ಕಂಡುಬಂದಿದೆ.


ಈ ದಂಪತಿಗೆ ಮದುವೆಯಾಗಿ 6 ವರ್ಷವಾಗಿತ್ತು. ತನ್ನ ಇಬ್ಬರು ಮಕ್ಕಳು ಹಾಗೂ ಗಂಡನ ಜೊತೆ ಸುಖದ ಸಂಸಾರ ನಡೆಸಿದ್ದ ತಾಯಿ ಪೂವಿತಾ ಇದೀಗ ಪತಿ ಮತ್ತು ಮಗುವನ್ನು ಕಳೆದುಕೊಂಡು ರೋದಿಸುತ್ತಿರುವುದನ್ನು ನೋಡಿದರೆ ಎಂತವರ ಮನಸ್ಸು ಕೂಡ ಕರಗುತ್ತದೆ.


Share this Story:

Follow Webdunia kannada

ಮುಂದಿನ ಸುದ್ದಿ

ಸ್ನೇಹಿತನ ಜೊತೆ ಸೇರಿ ಹೆತ್ತ ಮಗಳ ಮೇಲೆ ಅತ್ಯಾಚಾರ ಮಾಡಿ ಗರ್ಭವತಿ ಮಾಡಿದ ಪಾಪಿ ತಂದೆ