Publish Date: Wed, 02 Jan 2019 (15:59 IST)
Updated Date: Wed, 02 Jan 2019 (16:01 IST)
ಲಕ್ಷಾಂತರ ರೂಪಾಯಿ ಬೆಲೆ ಬಾಳುವ ರಕ್ತಚಂದನವನ್ನು ತೂಕ ಮಾಡುವಾಗ ಅಧಿಕಾರಿಗಳು ವಶಕ್ಕೆ ತೆಗೆದುಕೊಂಡಿದ್ದಾರೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ವಲಯ ಅರಣ್ಯಾದಿಕಾರಿಗಳಿಂದ ಮಿಂಚಿನ ಕಾರ್ಯಾಚರಣೆ ನಡೆದಿದೆ.
ಆರು ಲಕ್ಷ ರೂಪಾಯಿ ಬೆಲೆಬಾಳುವ 196 ಕೆ.ಜಿ. ತೂಕದ ಒಂಭತ್ತು ರಕ್ತಚಂದನ ತುಂಡುಗಳನ್ನು ವಶಕ್ಕೆ ಪಡೆಯಲಾಗಿದೆ.
ಖಚಿತ ಮಾಹಿತಿ ಮೇರೆಗೆ ಗೊಣಕನಹಳ್ಳಿ ಗೇಟ್ ಸಮೀಪದ ನೀಲಿಗಿರಿ ತೋಪಿನಲ್ಲಿ ತೂಕಮಾಡುವಾಗ ದಾಳಿ ನಡೆಸಿದ ಅಧಿಕಾರಿಗಳು ರಕ್ತ ಚಂದನ ವಶಕ್ಕೆ ಪಡೆದುಕೊಂಡರು.
ಅರಣ್ಯ ಇಲಾಖೆಯ ವಾಹನವನ್ನು ಕಂಡು ಆರೋಪಿಗಳು ಪರಾರಿಯಾದರು.