ಪ್ರಿಯಕರ ಮತ್ತು ಸ್ನೇಹಿತರಿಂದ ಯುವತಿಯ ಮೇಲೆ 10 ತಿಂಗಳುಗಳ ಕಾಲ ಅತ್ಯಾಚಾರ

ಬುಧವಾರ, 9 ಜನವರಿ 2019 (08:00 IST)
ಹೈದರಾಬಾದ್ : ಯುವತಿಯೊಬ್ಬಳ ಮೇಲೆ ಪ್ರಿಯಕರ ಮತ್ತು ಆತನ ಇಬ್ಬರು ಗೆಳೆಯರು ಸೇರಿ 10 ತಿಂಗಳು ಅತ್ಯಾಚಾರ ಎಸಗಿದ ಘಟನೆ ತೆಲಂಗಾಣದ ಪೆದ್ದಪಲ್ಲಿಯ ಬೊಮ್ಮಪಲ್ಲಿ ಎಂಬಲ್ಲಿ ನಡೆದಿದೆ.


ಕೊಟ್ಟೆ ರಂಜಿತ್(24), ಸತೀಶ್ (23) ಮತ್ತು ವೈಕುಂಠಂ (24)  ಪ್ರಕರಣದ ಆರೋಪಿಗಳಾಗಿದ್ದು, ರಂಜಿತ್ ಮತ್ತು ಯುವತಿ ಒಬ್ಬರನ್ನೊಬ್ಬರು ಪ್ರೀತಿಸುತ್ತಿದ್ದರು. ವಿವಾಹಕ್ಕೂ ಮೊದಲೇ ರಂಜಿತ್ ಮತ್ತು ಯುವತಿ ದೈಹಿಕ ಸಂಪರ್ಕ ಹೊಂದಿದ್ದರು. ಇದನ್ನೇ ದುರುಪಯೋಗಪಡಿಸಿಕೊಂಡ ರಂಜಿತ್ ತನ್ನ ಇಬ್ಬರು ಗೆಳೆಯರ ಜೊತೆ ಸೇರಿ10 ತಿಂಗಳು ಅತ್ಯಾಚಾರ ಎಸಗಿದ್ದಾನೆ.


ಇದರಿಂದ ಗರ್ಭಿಣಿಯಾಗಿದ್ದ ಯುವತಿಗೆ ಗರ್ಭಪಾತವಾಗಿತ್ತು. ಇಷ್ಟಾದರೂ  ರಂಜಿತ್ ಮದುವೆಗೆ ಒಪ್ಪದ ಕಾರಣ ಯುವತಿ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾಳೆ. ಈ ದೂರಿನ ಮೇರೆಗೆ ಸೆಕ್ಷನ್ 376(ಡಿ) ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಗಳ ಬಂಧನಕ್ಕಾಗಿ ಬಲೆ ಬೀಸಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ಆರ್.ವಿ ದೇಶಪಾಂಡೆಯನ್ನು ಪಕ್ಷದಿಂದ ಉಚ್ಚಾಟನೆ ಮಾಡಿ ಎಂದು ಕಾಂಗ್ರೆಸ್ ಮುಖಂಡರು ಆಗ್ರಹಿಸಿದ್ಯಾಕೆ?