20 ವರ್ಷದ ವಿದ್ಯಾರ್ಥಿನಿಯನ್ನು ಅಪಹರಿಸಿ 6 ಮಂದಿ ಕಾಮುಕರಿಂದ 2 ದಿನಗಳ ಕಾಲ ಸಾಮೂಹಿಕ ಅತ್ಯಾಚಾರ

ಮಂಗಳವಾರ, 8 ಜನವರಿ 2019 (13:41 IST)
ರಾಂಚಿ : 20 ವರ್ಷದ ಎಂಜಿನಿಯರಿಂಗ್ ವಿದ್ಯಾರ್ಥಿನಿಯನ್ನು ಅಪಹರಿಸಿದ ಆಕೆಯ ಸಹೋದರನ ಸ್ನೇಹಿತ  ತನ್ನ ಸ್ನೇಹಿತರ ಜೊತೆ ಸೇರಿ  ಎರಡು ದಿನಗಳ ಕಾಲ ಸಾಮೂಹಿಕ ಅತ್ಯಾಚಾರ ಎಸಗಿರುವ ಘಟನೆ ಜಾರ್ಖಂಡ್‍ನ ಚಕ್ರಧರ್ಪುರದಲ್ಲಿ ನಡೆದಿದೆ.


ಡಿಸೆಂಬರ್ 30 ರಂದು ಜಾರ್ಸಗುಡದಲ್ಲಿರುವ ತನ್ನ ಮನೆಗೆ ತೆರಳಲೆಂದು ರೈಲ್ವೆ ನಿಲ್ದಾಣದಲ್ಲಿ ಕಾಯುತ್ತಿದ್ದ ಸಂತ್ರಸ್ತೆಯನ್ನು ಪುಸಲಾಯಿಸಿ ತನ್ನ ಮನೆಗೆ ಕರೆದುಕೊಂಡ ಹೋದ ಆಕೆಯ ಸೋದರನ ಸ್ನೇಹಿತ ಚಕ್ರಧರ್ಪುರದ ಲೋಟಪಹಾರ್ ಪ್ರದೇಶದ ಒಂದು ಮನೆಯಲ್ಲಿ ಕೂಡಿ ಹಾಕಿದ್ದಾನೆ. ಬಳಿಕ ಆತನೊಂದಿಗೆ ಐವರು ಸೇರಿಕೊಂಡು ಎರಡು ದಿನಗಳ ಕಾಲ ಅತ್ಯಾಚಾರ ಎಸಗಿದ್ದಾರೆ. ಅತ್ಯಾಚಾರದ ನಂತರ ಜನವರಿ 1ರಂದು ವಿದ್ಯಾರ್ಥಿನಿಯನ್ನು ಸಮೀಪದ ಕಾಡಿನಲ್ಲಿ ಎಸೆದು ಪರಾರಿಯಾಗಿದ್ದಾರೆ.


ಬಳಿಕ ಎಚ್ಚರಗೊಂಡ ಸಂತ್ರಸ್ತೆ ಸ್ಥಳೀಯ ಠಾಣೆಗೆ ತೆರಳಿ ನಡೆದ ಘಟನೆಯ ಬಗ್ಗೆ ಪೊಲೀಸರಿಗೆ ತಿಳಿಸಿದ್ದಾರೆ. ಸಂತ್ರಸ್ತೆಯನ್ನು ಆಸ್ಪತ್ರೆಗೆ ದಾಖಲಿಸಿದ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಎರಡು ತಂಡಗಳನ್ನು ರಚಿಸಿ ಆರೋಪಿಗಳಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ಸಿಬಿಐ ನಿರ್ದೇಶಕ ಅಲೋಕ್‌ ವರ್ಮಾರನ್ನು ಮರು ನೇಮಕ ಮಾಡುವಂತೆ ಸುಪ್ರೀಂ ಕೋರ್ಟ್‌ನಿಂದ ಮಹತ್ವದ ತೀರ್ಪು ಪ್ರಕಟ